ಹುಬ್ಬಳ್ಳಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ. ಜೂಜಾಟದಲ್ಲಿ ತೊಡಗಿದ್ದವರ ಬಂಧನ.ಸುಳ್ಳ ಗ್ರಾಮದಲ್ಲಿ ಎಲೆ ತಟ್ಟುತ್ತಿದ್ದ ಗ್ಯಾಂಗ್ ಬೆನ್ನು ತಟ್ಟಿದ ಪೊಲೀಸರು. 6 ಜನರ ಬಂಧನ.
ಹುಬ್ಬಳ್ಳಿ -ಜೂಜಾಟದ ಅಡ್ಡೆಗಳ ಮೇಲೆ ಹುಬ್ಬಳ್ಳಿ ಗ್ರಾಮೀಣ ಪೊಲೀಸರ ದಾಳಿ ಮುಂದುವರೆದಿದೆ.ಹೌದು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಟ್ಟು ಬಿಡದೆ ನಿರಂತರವಾಗಿ ದಾಳಿಯನ್ನು ಮಾಡಿಕೊಂಡು ಬರುತ್ತಿರುವ ಇನ್ಸ್ಪೇಕ್ಟರ್ ಮುರುಗೇಶ ಚೆನ್ನಣ್ಣನವರ ನೇತ್ರತ್ವದಲ್ಲಿ ಸುಳ್ಳ ಗ್ರಾಮದಲ್ಲಿ ಜೂಜಾಟದಲ್ಲಿ ತೊಡಗಿದ್ದ ಜಾಲದ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.ಗ್ರಾಮದ ಹೊರವಲಯದಲ್ಲಿ ಜೂಜಾಟವಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಮಾಡಿ ಆರು ಜನರನ್ನು ಬಂಧನ ಮಾಡಿದ್ದಾರೆ.ಖಚಿತವಾದ ಮಾಹಿತಿಯನ್ನು ಪಡೆದುಕೊಂಡ ಪೊಲೀಸರು ಕಾರ್ಯಾಚರಣೆ ಮಾಡಿ ಜಾಲವನ್ನು ಬೇಧಿಸಿದ್ದಾರೆ.ಆರು ಜನರನ್ನು ಬಂಧನ ಮಾಡಿರುವ ಪೊಲೀಸರು 42500 ರೂಪಾಯಿಯನ್ನು ವಶಕ್ಕೆ ತಗೆದುಕೊಂಡು ಈ ಕುರಿತಂತೆ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಅಕ್ರಮವಾಗಿ ಸರಾಯಿಯನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧನ ಮಾಡಲಾಗಿದೆ.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಮಾವನೂರು ಗ್ರಾಮದಲ್ಲಿ ವ್ಯಕ್ತಿಯೊರ್ವ ಅಕ್ರಮವಾಗಿ ಮಾರಾಟ ಮಾಡುತ್ತಿದ್ದನು.ಈ ಒಂದು ಮಾಹಿತಿಯನ್ನು ಪಡೆದುಕೊಂಡು ಪೊಲೀಸರು ಮಾರಾಟ ಮಾಡುತ್ತಿದ್ದ ಸರಾಯಿಯೊಂದಿಗೆ ವ್ಯಕ್ತಿಯೊರ್ವನನ್ನು ಬಂಧನ ಮಾಡಿದ್ದಾರೆ.ಈ ಕುರಿತಂತೆ ಪ್ರಕರಣವನ್ನು ದಾಖಲು ಮಾಡಿಕೊಂಡಿರುವ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.