ದೆಹಲಿ ಸಿಇಸಿ ಸಭೆಯಲ್ಲಿ ರಜತ್ ಉಳ್ಳಾಗಡ್ಡಿಮಠ ಹೆಸರು ಅಂತಿಮ.
ಹುಬ್ಬಳ್ಳಿ : ಲೋಕಸಭಾ ಚುನಾವಣೆ ಕಾವು ದಿನೇ ದಿನೇ ಹೆಚ್ಚಾಗುತ್ತಿದೆ ಬಿಜೆಪಿಯ ಕರ್ನಾಟಕ ಪಟ್ಟಿ ಬಿಡುಗಡೆ ಮುನ್ನವೇ ಕಾಂಗ್ರೆಸ್ ಮೊದಲ ಪಟ್ಟಿ ರೆಡಿಯಾಗಿದೆ.ದೆಹಲಿಯಲ್ಲಿ ಕಳೆದ ರಾತ್ರಿ ನಡೆದ ಸಿಇಸಿ ಸಭೆಯಲ್ಲಿ ಕರ್ನಾಟಕದ 18 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದ್ದು ಅದರಲ್ಲಿ ಧಾರವಾಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಲಾಗಿದ್ದು.ಅಂತಿಮಕ್ಕು ಮುನ್ನ ಜಿಲ್ಲೆಯ ಶಾಸಕರು ಹಾಗೂ ಸರ್ವೇ ಗಳ ಅಭಿಪ್ರಾಯ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ
ಜಗದೀಶ್ ಶೆಟ್ಟರ್ ರಿಂದ ವಿಧಾನಸಭೆ ಟಿಕೆಟ್ ಕೈ ತಪ್ಪಿದ ನಂತರ ಲೋಕಸಭೆಗೆ ತಯಾರಿ ನಡೆಸುತ್ತಿದ್ದ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಹೆಸರೇ ಸಿಇಸಿ ಸಭೆಯಲ್ಲಿ ಫೈನಲ್ ಆಗಿದ್ದು ಇನ್ನೇನು ಅಂತಿಮ ಹಂತದಲ್ಲಿ ಚರ್ಚೆಯ ನಂತರ ಪಟ್ಟಿಯಲ್ಲಿ ಗೋಷಣೆ ಮಾಡುವ ಸಾದ್ಯತೆ ಇದೆ.
ಬೆಳಗಾವಿ, ಹಾವೇರಿ ಲೋಕಸಭಾ ಅಭ್ಯರ್ಥಿಗಳ ಮೇಲೆ ಧಾರವಾಡ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎನ್ನುವ ಗುಸು ಗುಸು ಕೇಳಿ ಬಂದರು ಇದ್ಯಾವುದಕ್ಕೂ ಮಣೆ ಹಾಕದ ಕಾಂಗ್ರೆಸ್ ಹೈಕಮಾಂಡ್.ಕ್ರಿಯಾಶೀಲ ಕಾರ್ಯಕರ್ತರಿಗೆ ಅವಕಾಶ ನೀಡುವ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.ಅಲ್ಲದೆ ರಜತ್ ಆಯ್ಕೆ ಮೂಲಕ ಲಿಂಗಾಯತ ಹಾಗೂ ಯುವಕರಿಗೆ ಆದ್ಯತೆ ನೀಡುವ ಸೂಚನೆಯನ್ನು ಕೂಡ ನೀಡಲಾಗುತ್ತಿದೆ.