ರೌಡಿ ಶೀಟರ್ ದಾವೂದ್ (ಎಂಡಿ) ಕೊಲೆ ಯತ್ನ ಪ್ರಕರಣ.ಕೊಲೆ ಯತ್ನದ ಸಿಸಿಟಿವಿ ಪುಟೇಜ್ ಉದಯ ನ್ಯೂಸ್ ಗೆ ಲಬ್ಯ.
ಹುಬ್ಬಳ್ಳಿ:- ಕಳೆದ ಗುರುವಾರ ರಾತ್ರಿ ಎಲ್ಲರೂ ಶಿವರಾತ್ರಿ ಸಂಬ್ರಮದಲ್ಲಿರುವಾಗ ಎರಡು ಗುಂಪು ರೌಡಿ ಶೀಟರ್ ದಾವೂದ್ @(MD) ಮೇಲೆ ಕಾರಪುಡಿ ಎರಚಿ ಕೊಲೆಗೆ ಯತ್ನಿಸಿದ ಸಿಸಿ ಟಿವಿ ದೃಶ್ಯಾವಳಿ ಉದಯ ವಾರ್ತೆ ಗೆ ಲಬ್ಯವಾಗಿದೆ.ಅಂಜುಮನ್ ಆಸ್ಪತ್ರೆ ಬಳಿ ಎರಡು ಗುಂಪುಗಳಲ್ಲಿ ಒಂದು ಗುಂಪು ಕಾರಪುಡಿ ಎರಚಿ ಮುಂದೆ ಹೋಗುವ ಹಾಗೂ ಅವನನ್ನು ಫಿನಿಶ್ ಮಾಡಲು ಬೆನ್ನತ್ತಿದ ಇನ್ನೊಂದು ಟೀಮನ ದೃಶ್ಯಾವಳಿಗಳು ಲಬ್ಯವಾಗಿವೆ.
ಕೆಲ ರೌಡಿ ಶೀಟರ್ ದಾವೂದ್ ಕೊಲೆ ಪ್ರಕರಣವೊಂದರಲ್ಲಿ ಜೈಲು ವಾಸ ಅನುಭವಿಸಿ ಬಂದು ಕೆಲವೇ ದಿನಗಳಲ್ಲಿ ಹಣ ಅಂತಸ್ತು, ಹೆಸರು ಕೂಡಾ ಮಾಡಿದ್ದನು.ನಂತರ ಇತ್ತೀಚೆಗೆ ಈ ರೌಡಿಸಂ ಅದು ಇದು ಬೇಡ ಎಂದು ಸಾಮಾಜಿಕ ಕೆಲಸದಲ್ಲಿ ತೊಡಗಿಕೊಂಡಿದ್ದ ಎನ್ನಲಾಗಿದೆ.
ಸಾಮಾಜಿಕ ಕೆಲಸಗಳ ಮಧ್ಯೆಯೂ ಇನ್ನೊಂದು ಆಟ ಆರಂಭಿಸಿದ್ದ ಆ ಆಟದ ವೈಸಮ್ಯ ಹಾಗೂ ಹಿಂದಿನ ಕೊಲೆ ಪ್ರಕರಣ ಇಟ್ಟುಕೊಂಡು ದಾವೂದನನ್ನು ಮುಗಿಸಲು ಯತ್ನ ನಡೆಸಿದ್ದರು ಎನ್ನಲಾಗಿದೆ.