ವಿಶ್ವ ಹೃದಯ ದಿನಾಚರಣೆ ದಿನದಂದು ವಾಕ್ ಥಾನ್ ನಲ್ಲಿ ಪಾಲ್ಲೊಂಡ ಸಚಿವ ಸಂತೋಷ ಲಾಡ್ – ವಾಕ ಥಾನ್ ನಲ್ಲಿ ಹೆಜ್ಜೆ ಹಾಕಿ ಆರೋಗ್ಯಯುತ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು.
ಬೆಂಗಳೂರು –
ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ಅರ್ಥಪೂರ್ಣವಾದ ಕಾರ್ಯಕ್ರಮ ನಡೆಯಿತು.ಹೌದು
ವಿಶ್ವ ಹೃದಯ ದಿನದ ಅಂಗವಾಗಿ ತಥಾಗತ್ ಆಸ್ಪತ್ರೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಗರದಲ್ಲಿ ಅರ್ಥಪೂರ್ಣವಾದ ಕಾರ್ಯಕ್ರಮವೊಂದು ನಡೆಯಿತು.ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಿಂದ ಮಂತ್ರಿಮಾಲ್‌ವರೆಗೆ ಹಮ್ಮಿಕೊಂಡಿದ್ದ ವಾಕಥಾನ್‌ನಲ್ಲಿ ಇದೇ ವೇಳೆ ಸಚಿವರಾದ ಸಂತೋಷ ಲಾಡ್ ದಿನೇಶ್ ಗುಂಡೂರಾವ್ ಕೂಡಾ ಹೆಜ್ಜೆ ಹಾಕಿದರು.ವಾಕಥಾನ್ ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರೊಂದಿಗೆ ಸಚಿವ ಸಂತೋಷ ಲಾಡ್ ಹೆಜ್ಜೆ ಹಾಕಿ ವಿಶ್ವ ಹೃದಯ ದಿನಾಚರಣೆ ಕುರಿತಂತೆ ಒಳ್ಳೇಯ ಸಂದೇಶವನ್ನು ನೀಡಿದರು.ಈ ಒಂದು ಸಂದರ್ಭದಲ್ಲಿ ಮಾಜಿ ಶಾಸ ಶಾಸಕಿ ಸೌಮ್ಯ ರೆಡ್ಡಿ, ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಮಹಾಂತೇಶ್ ಆರ್ ಚರಂತಿಮಠ, ನಿರ್ದೇಶಕರಾದ ಡಾ. ಶಿವಶಂಕರ್ ವೇಲು, ಲಯನ್ಸ್ ಕ್ಲಬ್ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ನ ಪದಾಧಿಕಾರಿಗಳು, ಆಸ್ಪತ್ರೆಯ ಸಿಬ್ಬಂದಿ, ಮತ್ತಿತರರು ಉಪಸ್ಥಿತರಿದ್ದರು.
ಉದಯ ವಾರ್ತೆ ಬೆಂಗಳೂರು