ಜಗದೀಶ ಶೆಟ್ಟರಗೆ ಬೆಳಗಾವಿಯ ಟಿಕೆಟ್ಟೂ ಮಿಸ್. ? ಶೆಟ್ಟರ ಮುಂದಿನ ನಡೆ ಏನು..?..ದಿಡೀರನೇ ಡೆಲ್ಲಿ ಪ್ಲೈಟ್ ಹತ್ತಿದ ಶೆಟ್ಟರ..ಶೆಟ್ಟರ ಟಿಕೆಟ್ ತಪ್ಪಿಸಲು ಹಿಂದೂ ಹುಲಿ ತಂದಿಟ್ಟ ಶೆಟ್ಟರ ವಿರೋಧಿ ಬಣ.
ಜಗದೀಶ ಶೆಟ್ಟರಗೆ ಬೆಳಗಾವಿಯ ಟಿಕೆಟ್ಟೂ ಮಿಸ್. ? ಶೆಟ್ಟರ ಮುಂದಿನ ನಡೆ ಏನು..?..ದಿಡೀರನೇ ಡೆಲ್ಲಿ ಪ್ಲೈಟ್ ಹತ್ತಿದ ಶೆಟ್ಟರ..ಶೆಟ್ಟರ ಟಿಕೆಟ್ ತಪ್ಪಿಸಲು ಹಿಂದೂ ಹುಲಿ ತಂದಿಟ್ಟ ಶೆಟ್ಟರ ವಿರೋಧಿ ಬಣ.
ಹುಬ್ಬಳ್ಳಿ:-ಮಾಜಿ ಸಿಎಂ ಜಗದೀಶ್ ಶೆಟ್ಟರ ಘರ್ ವಾಪಾಸ್ಸೀ ಆದ ಮೇಲೆ ಅವರ ಗ್ರಹಗತಿಯೇ ಚೆನ್ನಾಗಿಲ್ಲಾ ಅಂತಾ ಕಾಣುತ್ತೇ.ಲೋಕಸಭೆಗೆ ಹಾವೇರಿ,ಧಾರವಾಡ,ಬೆಳಗಾವಿ ಈ ಮೂವರಲ್ಲಿ ಒಂದು ಕಡೆ ಶೆಟ್ಟರ ಪಕ್ಕಾ ಎನ್ನಲಾಗಿತ್ತು.ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಹಾವೇರಿ ಹಾಗೂ ಧಾರವಾಡ ಟಿಕೆಟ್ ಘೋಷಣೆಯಾದ ಮೇಲೆ ಬೆಳಗಾವಿ ಮೇಲೆ ಕಣ್ಣಿಟ್ಟಿದ್ದ ಶೆಟ್ಟರಗೆ ಅಲ್ಲಿಯೂ ಅಡ್ಡಗಾಲು ಹಾಕಿದ್ದಾರೆ.
ಬೆಳಗಾವಿ ಟಿಕೆಟ್ ಅನ್ನು ತಪ್ಪಿಸಲು ಶೆಟ್ಟರ ವಿರೋಧಿ ಬಣ ಪುಲ್ ಆ್ಯಕ್ಟಿವಾ ಆಗಿದೆ.ಶೆಟ್ಟರನ್ನು ಧಾರವಾಡದಿಂದ ಮೊದಲು ಗಡಿಪಾರು ಮಾಡಿ ನಂತರ ಮತ್ತೊಂದು ಆಟ ಆಡಿದರು ಆಯಿತು ಅಂತಾ ಈಗ ಹಿಂದೂ ಹುಲಿ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಎಂಟ್ರಿ ಹೊಡೆಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಶೆಟ್ಟರ ಬೆಂಗಳೂರಿಗೆ ಹೋಗಿ ಬೆಳಗಾವಿ ಟಿಕೆಟ್ ಗಟ್ಟಿ ಮಾಡಿಕೊಂಡು ಬರುತ್ತಿದ್ದಂತೆ ಬೆಳಗಾವಿಯಲ್ಲಿ ಶೆಟ್ಟರ ವಿರೋಧಿ ಬಣ ಶೆಟ್ಟರಗೆ ವಿರೋಧವಿದೆ ಎನ್ನುವಂತೆ ಬಿಂಬಿಸಲು ಆರಂಭ ಮಾಡಿತು.ಬಿ ಎಲ್ ಸಂತೋಷ ಬಣದ ಈರಣ್ಣ ಕಡಾಡಿ,ಅಭಯ ಪಾಟೀಲ,ಸೇರಿದಂತೆ ಹಲವು ಮುಖಂಡರು ಪ್ರಭಾಕರ ಕೋರೆ ನಿವಾಸದಲ್ಲಿ ಸಭೆ ನಡೆಸಿ ಸ್ಥಳೀಯರಿಗೆ ಟಿಕೆಟ್ ಎಂದು ಹೇಳಿಕೆ ನೀಡಿದರು.
ಇದೆಲ್ಲದರ ಮದ್ಯೆ ಹಿಂದೂ ಹುಲಿ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಎಂಟ್ರಿ ಹೊಡೆಸಿ ಬೆಳಗಾವಿಯಿಂದ ಟಿಕೆಟ್ ಕೊಡಿಸಿದರೆ ಗೆಲವು ಸಹಜ ಎಂದು ದೆಹಲಿಗೆ ಮಾಹಿತಿ ರವಾನಿಸಿದ್ದಾರೆ.ಅಲ್ಲದೇ ಬೆಳಗಾವಿಯಲ್ಲಿ ಈಗಾಗಲೇ ಶೆಟ್ಟರಗೆ ವಿರೋಧ ಹೆಚ್ಚಾಗಿದೆ ಅಂತಾ ಕಟ್ಟು ಕಥೆ ಕಟ್ಟಿ ಶೆಟ್ಟರಗೆ ಟಿಕೆಟ್ ತಪ್ಪಿಸುವ ಎಲ್ಲಾ ಡ್ರಾಮಾಗಳು ಆರಂಭವಾಗಿವೆ.
ಅಲ್ಲದೇ ಇಂದು ದೆಹಲಿಯಲ್ಲಿ ಸಂಸದೀಯ ಮಂಡಳಿಯ ಸಭೆ ಸಾಯಂಕಾಲ ನಡೆಯಲಿದ್ದು ಅಷ್ಟರೊಳಗೆ ಬೆಳಗಾವಿಯಲ್ಲಿ ಇನ್ನೊಂದು ಸರ್ವೇ ನಡೆಸಿ,ಆ ಸರ್ವೇಯಲ್ಲೂ ಜಗದೀಶ ಶೆಟ್ಟರ ಸೋಲತಾರೆ ಅಂತಾ ರಿಪೋರ್ಟ್ ಕಳಿಸಿ ಶೆಟ್ಟರಗೆ ಟಿಕೆಟ್ ತಪ್ಪಿಸುವ ಪ್ಲ್ಯಾನ್ ನಡೆದಿದೆ.
ಜಗದೀಶ ಶೆಟ್ಟರಗೆ ಬೆಳಗಾವಿ ಟಿಕೆಟ್ ಕೊಟ್ಟರೆ ಆರಿಸಿ ಬರುವುದು ಪಕ್ಕಾ.ಆ ಮೇಲೆ ಮಂತ್ರಿಗಿರಿಗೆ ಲಿಂಗಾಯತರ ಲಾಭಿ ನಡೆಯಲಿದೆ.ಅದನ್ನೂ ಗನದಲ್ಲಿಟ್ಟುಕೊಂಡೇ ಶೆಟ್ಟರ ಅವರನ್ನು ಈಗಲೇ ಟಿಕೆಟ್ ತಪ್ಪಿಸಿ ಮುಂದಿನ ಹಾದಿ ಸುಗಮಗೊಳಿಸುವ ಪ್ಲ್ಯಾನ್ ನಡೆದಿದೆ ಎನ್ನಲಾಗಿದೆ.