ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ ಮೂರುಲಕ್ಷ ಎಂಬತ್ತೆರಡು ಸಾವಿರ ಹಣ ವಶ.ಮಹಾನಗರ ಪಾಲಿಕೆಯ ಸುಳ್ಳ ರಸ್ತೆಯ ಚೆಕ್ ಪೋಸ್ಟ್ ನಲ್ಲಿ ಹಣ ವಶ.
ಹುಬ್ಬಳ್ಳಿ:- ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ ಮೂರುಲಕ್ಷ ಎಂಬತ್ತೆರಡು ಸಾವಿರ ನಗದು ಹಣವನ್ನು ಸುಳ್ಳ ರಸ್ತೆಯ ಚೆಕ್ ಪೋಸ್ಟನಲ್ಲಿ ವಶಪಡಿಸಿಕೊಳ್ಳಲಾಗಿದೆ.
ಗುಜರಾತ್ ರಾಜ್ಯದ ನಂಬರ ಕಾರಿನಲ್ಲಿ ಹಣ ಸಾಗಾಟ ಮಾಡುತ್ತಿದ್ದಾಗ ಚೆಕ್ ಪೋಸ್ಟ್ ಸಿಬ್ಬಂದಿಗಳು ತಪಾಸಣೆ ವೇಳೆ ಹಣ ಸಿಕ್ಕಿದೆ.ಕಿರೇಸೂರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿರುವಾಗ ಚೆಕ್ ಪೋಸ್ಟನಲ್ಲಿ ತಪಾಸಣೆ ವೇಳೆ ದಾಖಲೆ ಇಲ್ಲದ ಹಣ ದೊರೆತಿದೆ.
ಮೂರು ಲಕ್ಷ ಎಂಬತ್ತೆರಡು ಸಾವಿರ ನಗದು ಒಂದು ಕಾರು ಹಾಗೂ ನಾಲ್ಕು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.