ಜಾತ್ರೆಗೆ ಹೊರಟವರಲ್ಲಿ ಒಬ್ಬ ಇಹಲೋಕಕ್ಕೆ.ನಾಲ್ವರು ಆಸ್ಪತ್ರೆಗೆ.ಕುಟುಂಬದಲ್ಲಿ ಮಡುಗಟ್ಟಿದ ವಾತಾವರಣ.•
ಹುಬ್ಬಳ್ಳಿ:-ನಾಳೆ ನಡೆಯಲಿರುವ ಸಂತ ಶಿಸುವಿನಹಾಳ ಶರೀಫರ ಜಾತ್ರೆಗೆ ಹೊರಟ ಅಟೋಗೆ ಕಂಟೇನರ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿದ್ದು ನಾಲ್ವರು ಆಸ್ಪತ್ರೆಗೆ ದಾಖಲಾದ ಘಟನೆ ಜರುಗಿದೆ.
ಹುಬ್ಬಳ್ಳಿ ಸಮೀಪ ನೂಲ್ವಿ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತದಲ್ಲಿ ಚನ್ನಾಪುರ ಗ್ರಾಮದ ಈರಪ್ಪ ಎಂಬಾತ ಸ್ಥಳದಲ್ಲಿಯೇ ಸಾವನ್ನಪ್ಪಿದರೆ ನಾಲ್ಕು ಜನರು ಗಾಯಗೊಂಡು ಕಿಮ್ಸ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಪೋಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.