ಅಂದು ಶೆಟ್ಟರ್ ಇಂದು ನಾಲವಾಡ ಏನಿದು MB ಪಾಟೀಲರ ಲೆಕ್ಕ..ಯುವ ನಾಯಕರಿಗೆ ಇಲ್ಲಾ ಅವಕಾಶ.
ಹುಬ್ಬಳ್ಳಿ : ಕಳೆದ ಬಾರಿ ವಿಧಾನಸಭೆ ಚುನಾವಣೆ ಸಮಯದಲ್ಲಿ ಇನ್ನೇನು ಸೆಂಟ್ರಲ್ ಟಿಕೆಟ್ ಅನೌನ್ಸ್ ಆಗುವ ಸಮಯದಲ್ಲಿ ರಜತ್ ಉಳ್ಳಾಗಡ್ಡಿಮಠ ತಮಗೆ ಟಿಕೆಟ್ ಪಿಕ್ಸ್ ಎನ್ನುತ್ತಿರುವಾಗ ಜಗದೀಶ್ ಶೆಟ್ಟರ್ ಅವರಿಗೆ ರತ್ನಗಂಬಳಿ ಹಾಯಿಸಿ ಸಚಿವ ಎಂ ಬೀ ಪಾಟೀಲ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದರು ಈ ವೇಳೆ ಸಹಜವಾಗಿ ದೊಡ್ಡ ನಾಯಕರು ಆಗಮಿಸಿದ್ದಾರೆ ಎಂದು ರಜತ್ ಉಳ್ಳಾಗಡ್ಡಿಮಠ ಟಿಕೆಟ್ ಮಿಸ್ ಮಾಡಿಕೊಂಡು ಅವಕಾಶ ವಂಚಿತರಾದರು.ಈಗ ಮತ್ತೆ ಅಂತಹದೇ ಸಂದರ್ಭವನ್ನು ಅಂದಿನ ಮಾಸ್ಟರ್ ಮೈಂಡ್ MB ಪಾಟೀಲರು ಹುಟ್ಟು ಹಾಕುತ್ತಿದ್ದಾರೆ ಎಂದರೆ ತಪ್ಪಾಗಲಾರದು.
ಹೌದು ಈ ಬಾರಿ ಲೋಕಸಭಾ ಚುನಾವಣೆಗೆ ತಮಗೆ ಟಿಕೆಟ್ ಸಿಗಬಹುದು ಎನ್ನುವ ನಿರೀಕ್ಷೆಯೊಂದಿಗೆ ರಜತ್ ಉಳ್ಳಾಗಡ್ಡಿಮಠ ಕಳೆದ ಆರು ತಿಂಗಳ ಹಿಂದೆಯೇ ಸಂಘಟನೆ ಶುರು ಮಾಡಿದ್ದರು.ನಂತರ ಇತ್ತೀಚಿಗೆ ಅಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಬೇರೊಬ್ಬರ ಹೆಸರನ್ನು ತೇಲಿ ಬಿಟ್ಟಿದ್ದರು.ಇದರ ಮದ್ಯೆಯೆ ತಮಗೆ ಟಿಕೆಟ್ ಸಿಗಬಹುದು ಎನ್ನುತ್ತಾ ಕಾಯುತ್ತಾ ಕುಳಿತಿದ್ದ ಕಾಂಗ್ರೆಸ್ ಮುಖಂಡರಿಗೆ ಇದೀಗ ಶಾಕ್ ಆಗಿದೆ.
ಮೂಲಗಳ ಮಾಹಿತಿಯಂತೆ ದೆಹಲಿಯಲ್ಲಿ ಸದ್ಯ ಬಿಜೆಪಿಯಲ್ಲಿರುವ ಡಾಕ್ಟರ್ ಮಹೇಶ್ ನಾಲವಾಡ MB ಪಾಟೀಲರ ಸಹಾಯದಿಂದ ಧಾರವಾಡ MP ಟಿಕೆಟ್ ಪಡೆಯಬಹುದು ಎನ್ನಲಾಗುತ್ತಿದೆ.ಹೀಗೆ ಆಗಿದ್ದೆ ಆದಲ್ಲಿ ಎರಡು ಮುಖ್ಯ ಚುನಾವಣೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ MB ಪಾಟೀಲ್ ತಮ್ಮ ಸಾಮರ್ಥ್ಯ ನಿರೂಪಿಸಿದರೆ ಎನ್ನುವಂತೆ ಆಗುತ್ತದೆ.ಇದೆ ಕಾರಣಕ್ಕೆ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರು ಒಳಗೊಳಗೇ ಮುನಿಸಿಕೊಂಡಿದ್ದ ನಮ್ಮ ಜಿಲ್ಲೆ ನಮ್ಮ ಕೈಯಲ್ಲಿ ಇಲ್ಲಾ ಎಂದು ಗೊನುಗುತ್ತಿದ್ದಾರೆ ಎಂದು ತಿಳಿದುಬಂದಿದೆ.