ನಿಂತ ಲಾರಿಗೆ ಗುದ್ದಿದ ಕ್ಯಾಂಟರ್ ಲಾರಿ; ಎರಡು ವಾಹನಗಳ ಮಧ್ಯ ಸಿಲುಕಿದ ಮೂವರು; ಪ್ರಾಣ ಉಳಿಸಿದ ಪೊಲೀಸರು.
ಹುಬ್ಬಳ್ಳಿ: ಗದಗದಿಂದ ಹುಬ್ಬಳ್ಳಿ ಕಡೆ ಬರುತ್ತಿದ್ದ ಮೈನ್ಸ್ ತುಂಬಿದ್ದ ಲಾರಿ ರಸ್ತೆ ಮಧ್ಯೇಯೆ ನಿಲ್ಲಿಸಿದ ಪರಿಣಾಮ, ಅದೇ ಮಾರ್ಗದಲ್ಲಿ ಹಿಂದೆ ಬರುತ್ತಿದ್ದ ಕ್ಯಾಂಟರ್ ಲಾರಿ, ನಿಂತ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ, ಕ್ಯಾಂಟರ್ ನಲ್ಲಿದ್ದ ಮೂವರು ಲಾರಿಯ ನಡುವೆ ಸಿಲುಕಿದ ಘಟನೆ ನಿನ್ನೆ ತಡರಾತ್ರಿ ಹುಬ್ಬಳ್ಳಿ ಹೊರವಲಯದ ಗದಗ ಶಿರಗುಪ್ಪಿ ನಡುವಿನ ಐಟಿಸಿ ಗುಡೌನ್ ಬಳಿ ನಡೆದಿದೆ.
ಇನ್ನು ಡಿಕ್ಕಿ ಹೊಡೆದ ರಭಸಕ್ಕೆ ಕ್ಯಾಂಟರ್ ಲಾರಿಯ ಗಾಜುಗಳು ಒಡೆದು, ಮೂವರ ಅರ್ಧ ದೇಹಗಳು ಲಾರಿ ಅಡಿಯಲ್ಲಿ ಸಿಲುಕಿದ್ದವು. ಅಪಘಾತದಲ್ಲಿ ಸಿಲುಕಿದ್ದವರನ್ನು ರಕ್ಷಿಸಲು ಸಾರ್ವಜನಿಕರು ಹರ ಸಾಹಸ ಪಟ್ಟರು. ಈ ವೇಳೆ ವಿಷಯವನ್ನು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಗಳಾದ ಗೋಪಾಲ್ ಬ್ಯಾಕೋಡಿಯವರ ಗಮನಕ್ಕೆ ತಂದ ಬೆನ್ನಲ್ಲೆ, ಗ್ರಾಮೀಣ ಭಾಗದ ಪೊಲೀಸರು, ಹೈವೆ ಅಂಬ್ಯುಲೆನ್ಸ್ ಸೇರಿದಂತೆ ಎರಡು ಅಂಬ್ಯುಲೆನ್ಸ್ ಗಳು ಸ್ಥಳಕ್ಕೆ ಬಂದು ಗಾಯಾಳುಗಳನ್ನು ರಕ್ಷಿಸಿ ಸುರಕ್ಷಿತವಾಗಿ ಹೊರತೆಗೆದು, ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಧಾರವಾಢ ಜಿಲ್ಲಾಪೊಲೀಸ್ ಎಸ್.ಪಿ ಗೋಪಾಲ್ ಬ್ಯಾಕೋಡ ಅವರ ಸ್ಪಂದನೆ ಹಾಗೂ ಸಿಬ್ಬಂದಿಗಳ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.