ಕ್ರಿಕೆಟ್ ಬೆಟ್ಟಿಂಗ್ ಕಿಂಗ್ ಶಂಭೋಶಂಕರನ ಹೈ ಪೈ ಬೆಟ್ಟಿಂಗ್ ದಂಧೆ.ಪೋಲೀಸರ ಕಣ್ಣಿಗೆ ಬಿದ್ದಿಲ್ಲಾ ದೇಶಪಾಂಡೆ ನಗರದ ಹರ ಹರ ಶಂಕರ.
ಹುಬ್ಬಳ್ಳಿ:- ಐಪಿಎಲ್ ಕ್ರಿಕೆಟ್ ಹಬ್ಬ ಆರಂಭ ಆಗಿದ್ದೇ ತಡ ಹುಬ್ಬಳ್ಳಿಯಲ್ಲಿ ದೇಶಪಾಂಡೆ ನಗರದ ಶಂಭೋಶಂಕರ,ಗೋಕುಲದ ತುಕಾಲಿರಾಮ,ನೃಪತುಂಗ ಬೆಟ್ಟದ ಕೆಳಗಿರುವ ರಾಘವೇಂದ್ರ ಹಾಗೂ ಇನ್ನೊಬ್ಬ ಸೇರಿ ನಾಲ್ಕು ಜನರು All exchange ಮೂಲಕ ಭರ್ಜರಿ ಬೆಟ್ಟಿಂಗ್ ದಂಧೆಗೆ ಇಳಿದಿದ್ದು ಎಲ್ಲರಿಗೂ ಗೊತ್ತಿದ್ದರೂ ನಮ್ಮ ಪೋಲೀಸರಿಗೆ ಇವರು ಕಾಣತಾನೇ ಇಲ್ಲಾ.
ಆ್ಯಪ್ ಒಂದರ ಮೂಲಕ ಎಲ್ಲೋ ಕುಂತು ಪೋನ್ ಮೂಲಕ ಭರ್ಜರಿ ಬೆಟ್ಟಿಂಗ್ ನಡೆಸುತ್ತಿರುವ ಈ ಆಸಾಮಿಗಳ ಬೆನ್ನತ್ತಬೇಕಾದ ಪೋಲೀಸರು ಇವರ ಕಡೆ ಗಮನಹರಿಸದಿರುವುದು ಯಾಕೆ ಅಂತಾ ಸಾಮಾನ್ಯರು ಕೇಳುವಂತಾಗಿದೆ.
ದಿನ ನಿತ್ಯ ಹಿರಿಯ ಪೋಲೀಸ ಅಧಿಕಾರಿಗಳು ಬೆಟ್ಟಿಂಗ್ ಕಡೆ ಗಮನಹರಿಸಿ ಕೇಸ್ ಮಾಡಲೇಬೇಕು ಅಂತಾ ಪದೇ ಪದೇ ಹೇಳಿದರೂ ಸ್ಟ್ರಾಂಗ್ ಸಿಸಿಬಿ ಮತ್ತು ಆಯಾ ಪೋಲೀಸ ಠಾಣೆಯ ಕ್ರೈಂ ಟೀಮ್ ಮಾಡುತ್ತಿರುವುದು ಮಾತ್ರ ಹಬ್ಬನೇ ಸರಿ.
ಹುಬ್ಬಳ್ಳಿ ಪೋಲೀಸರು ಕಥೆ ಮಾತ್ರ ಕಣ್ಣಮುಚ್ಚಿ ಹಾಲು ಕುಡಿದ ಬೆಕ್ಕಿನ ಕಥೆಯಾಗಿದೆ. ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಯಾರೂ ನೋಡೇ ಇಲ್ಲಾ ಅಂತಾ ಬೆಕ್ಕು ಅಂದುಕೊಂಡಿರುತ್ತೇ.ಆದರೆ ಬೆಕ್ಕು ಹಾಲು ಕುಡಿದಿದ್ದನ್ನ ಎಲ್ಲರೂ ನೋಡಿರುತ್ತಾರೆ ಅನ್ನೋದು ಆ ಬೆಕ್ಕಿಗೆ ಗೊತ್ತೇ ಇರಲ್ಲಾ ಹಾಗಾಗಿದೆ ನಮ್ಮ ಪೋಲೀಸರ ಕಥೆ.
ಕಳೆದ ಎರಡ್ಮೂರು ದಿನದ ಹಿಂದೆ ತನಿಖಾ ತಂಡದ ಕುರಿ ಸಾವಜಿ ಸೇರಿದಂತೆ ಎಲ್ಲೆಲ್ಲಿ ಎಷ್ಟು ತಿಂದಿದೆ ಅಂತಾ ಊರ ಗೌಡನಿಗೇ ಗೊತ್ತು.ಅಲ್ಲದೇ ಇಂಡಿ ಪಂಪ ಸುತ್ತ ಮುತ್ತ ಮಾರವಾಡಿಯಿಂದ ಲಕ್ಷ ಲಕ್ಷ ಪ್ರಸಾದ ಪಡೆದಿದ್ದು. ರಾಮನಗರದ ಆಸಾಮಿಗಳನ್ನು ತಂದು ಇಡೀ ರಾತ್ರಿ ಕುಳ್ಳಿರಿಸಿ 161 ಮಾಡಿದ ವರದಿಯನ್ನ ಶಿಘ್ರದಲ್ಲಿ ನಿಮ್ಮ ಉದಯ ವಾರ್ತೆಯಲ್ಲಿ.