ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪರ ಕುಂದಗೋಳದಲ್ಲಿ ಪ್ರಚಾರ ನಡೆಸಿದ ಬಿಜೆಪಿ ಯುವ ಮುಖಂಡ ಅಣ್ಣಪ್ಪ ಗೋಕಾಕ ಆ್ಯಂಡ್ ಟೀಮ್.
ಹುಬ್ಬಳ್ಳಿ:- ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪ್ರಚಾರದ ಅಂಗವಾಗಿ ಬಿಜೆಪಿ ಯುವ ಮುಖಂಡ ಅಣ್ಣಪ್ಪ ಗೋಕಾಕ ಹಾಗೂ ಟೀಂ ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ಭರ್ಜರಿ ಪ್ರಚಾರ ನಡೆಸಿದರು.
ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದ ತಹಶೀಲ್ದಾರ ಕಛೇರಿ,ನ್ಯಾಯಾಲಯದ ಆವರಣ,ಪಟ್ಟಣ ಪಂಚಾಯತ,ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಆವರಣದಲ್ಲಿ ಸರಕಾರಿ ನೌಕರರು ಹಾಗೂ ಸಾರ್ವಜನಿಕರನ್ನು ಭೇಟಿಯಾಗಿ ಕೇಂದ್ರ ಸಚಿವರ ಅಭಿವೃದ್ಧಿ ಕಾರ್ಯಗಳು ಮತ್ತು ಯೋಜನೆಗಳ ಕುರಿತು ಹೇಳುವ ಮೂಲಕ ಮತ್ತೊಮ್ಮೆ ಜೋಶಿಯವರಿಗೆ ನಿಮ್ಮ ಮತವಿರಲಿ ಎಂದು ಪ್ರಚಾರ ನಡೆಸಿದರು.
ನಾಲ್ಕು ಭಾರಿ ಧಾರವಾಡ ಲೋಕಸಭೆಯಿಂದ ಆಯ್ಕೆಯಾಗಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನ ಐದನೇ ಬಾರಿಗೆ ಲೋಕಸಭೆಗೆ ಅತೀ ಹೆಚ್ಚಿನ ಮತಗಳಿಂದ ಆಯ್ಕೆ ಮಾಡಿ ಲೋಕಸಭೆಗೆ ಕಳಿಸಬೇಕು ಅದಕ್ಕೆ ನಾವು ನೀವೆಲ್ಲಾ ಅವರಿಗೆ ಮತ ಹಾಕಬೇಕೆಂದು ಅಣ್ಣಪ್ಪ ಗೋಕಾಕ ಮನವಿ ಮಾಡಿದರು.
ಪ್ರಚಾರದಲ್ಲಿ ಹನಮಂತಗೌಡ್ರು.ಸರ್ಪರಾಜ್ ಸೇರಿದಂತೆ ಅನೇಕ ಕುರುಬ ಮುಖಂಡರು ಹಾಜರಿದ್ದು ಅಣ್ಣಪ್ಪ ಗೋಕಾಗೆ ಸಾಥ್ ನೀಡಿದರು.