ಚುನಾವಣಾ ಪ್ರಚಾರದ ಅಖಾಡಕ್ಕಿಳಿದ ದಿಂಗಾಲೇಶ್ವರ. ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮಿ ಪೀಠಕ್ಕೆ ಭೇಟಿ.ಬೆಂಬಲ ಕೋರಿದ ದಿಂಗಾಲೇಶ್ವರ.
ಹುಬ್ಬಳ್ಳಿ:- ದಿಂಗಾಲೇಶ್ವರ ಸ್ವಾಮಿಗಳು ಪಕ್ಷೇತರ ಅಬ್ಯೆರ್ಥಿ ಯಾಗಿ ಸ್ಪರ್ಧಿಸುವುದಾಗಿ ಘೋಷಣೆಯ ಬೆನ್ನಲ್ಲೇ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠಕ್ಕೆ ಭೇಟಿ ನೀಡಿ ಜಗದ್ಗುರು ವಚನಾನಂದ ಸ್ವಾಮಿಗಳೊಂದಿಗೆ ಮಾತುಕತೆ ನಡೆಸಿದರು.ಅಲ್ಲದೇ ನನಗೆ ಬೆಂಬಲ ನೀಡಬೇಕೆಂದು ಕೇಳಿದರು.
ದಿಂಗಾಲೇಶ್ವರ ಶ್ರೀಗಳ ಭೇಟಿ ನಂತರ ಮಾತನಾಡಿದ ವಚನಾನಂದ ಸ್ವಾಮಿಗಳು ದಿಂಗಾಲೇಶ್ವರ ಸ್ವಾಮಿಗಳು ಬಹಳ ಪವರ್ ಪುಲ್ಲ್.ಎಲ್ಲಾ ಸಮುದಾಯದ ಭಕ್ತ ಸಮೂಹವನ್ನು ಅವರು ಹೊಂದಿದ್ದಾರೆ. ಅವರು ಸಭೆ ನಡೆಸಿದರೆ ಲಕ್ಷಾಂತರ ಜನ ಸೇರತಾರೆ.ಅವರು ಚುನಾವಣೆಗೆ ಸ್ಪರ್ಧಿಸಿರುವುದನ್ನ ನಾನು ಸ್ವಾಗತ ಮಾಡತೇನಿ.
ಅಲ್ಲದೇ ದಿಂಗಾಲೇಶ್ವರ ಸ್ವಾಮಿಗಳು ಚುನಾವಣೆಗೆ ನಮ್ಮ ಬೆಂಬಲ ಕೋರಿದ್ದಾರೆ.ನಾವು ಭಕ್ತರ ಸಭೆ ಕರೆದು ನಮ್ಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.