ಹೋರಾಟವೇ ಇವರ ಬದುಕು.ಖಾವಿಯಿಂದ ಖಾದಿವರೆಗೆ.ದಿಂಗಾಲೇಶ್ವರ ನಡೆದು ಬಂದ ದಾರಿ.ಶ್ರೀಗಳ ರೋಚಕ ಇತಿಹಾಸ.

Share to all

ಹೋರಾಟವೇ ಇವರ ಬದುಕು.ಖಾವಿಯಿಂದ ಖಾದಿವರೆಗೆ.ದಿಂಗಾಲೇಶ್ವರ ನಡೆದು ಬಂದ ದಾರಿ.ಶ್ರೀಗಳ ರೋಚಕ ಇತಿಹಾಸ.

ಹುಬ್ಬಳ್ಳಿ:- ಖಾವಿಯಿಂದ ಖಾದಿಯವರೆಗೆ ಬಂದ ಶ್ರೀ ಫಕೀರ ದಿಂಗಾಲೇಶ್ವರ ಶ್ರೀಗಳು ಈಗ ಧಾರವಾಡ ಲೋಕಸಭೆಯ ಪಕ್ಷೇತರ ಅಬ್ಯೆರ್ಥಿಯಾಗಿ ಕಣಕ್ಕಿಳಿಯಲಿದ್ದು ಅವರು ನಡೆದು ಬಂದಿರುವುದು ಹೋರಾಟದ ಮೂಲಕವೇ.
ಶ್ರೀ ಜಗದ್ಗುರು ದಿಂಗಾಲೇಶ್ವರ ಮಹಾಸ್ವಾಮಿಗಳು ನಡೆದು ಬಂದ ದಾರಿ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ…

1976ರಲ್ಲಿ ಕೊಪ್ಪಳ ಜಿಲ್ಲೆಯ ಬೊಮ್ಮನಾಳ ಗ್ರಾಮದಲ್ಲಿ ಜನಿಸಿದ ಗದಗ ಜಿಲ್ಲೆಯ ಶಿರಹಟ್ಟಿಯ ಬಾಲೇಹೂಸೋರಿನ ದಿಂಗಾಲೇಶ್ವರ ಮಹಾಸ್ವಾಮಿಗಳು ದಿಂಗಾಲೇಶ್ವರ ಸಂಸ್ಥಾನ ವಿರಕ್ತಮಠ ಅವರ ಪೂರ್ವಾಶ್ರಮದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೊಮ್ಮನಾಳ ಗ್ರಾಮದ ವೇ. ವೀರಯ್ಯ ಪಾರ್ವತೆಮ್ಮ ಹಿರೇಮಠ ಅವರ ಪುತ್ರರಾಗಿ ಜುಲೈ ,2, 1976 ರಂದು ಜನನಪೂರ್ವಾಶ್ರಮದ ಹೆಸರು ಬೊಮ್ಮಯ್ಯ

ಶಿಕ್ಷಣವನ್ನು 1ರಿಂದ 3ನೇ ತರಗತಿ ಸ್ವಗ್ರಾಮದಲ್ಲಿ ಕಲಿತ ಅವರು ಹತ್ತನೇ ತರಗತಿಯನ್ನು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕು ಶ್ರೀ ಶಿವಯೋಗಮಂದಿರ ಸಂಸ್ಥೆಯಲ್ಲಿ ಅಧ್ಯಯನ, ನಂತರ ವಚನ, ಸ್ವರವಚನ, ಯೋಗ, ಕನ್ನಡ, ಸಂಸ್ಕೃತ, ಹಿಂದಿ, ಇಂಗ್ಲೀಷ್, ಸಂಗೀತ, ಪ್ರವಚನ ಮೂಲಕ ಪಾಂಡಿತ್ಯ ಪಡೆದರು.

ನಾಗನೂರ ಲಿಂ. ಶಿವಬಸವಮಹಾಸ್ವಾಮಿಗಳು ಮತ್ತು ಹಾಲಕೆರೆ ಲಿಂ. ಅಭಿನವ ಅನ್ನದಾನ ಮಹಾಸ್ವಾಮಿಗಳು. ಇವರ ಪವಿತ್ರ ಹಸ್ತದಿಂದ ಕಾವಿ ಧರಿಸಿದರು. ಶ್ರೀಗಳು ಕೊಪ್ಪಳ ಗವಿಮಠ, ಬಿಜಾಪೂರ ಜ್ಞಾನಯೋಗಾಶ್ರಮ, ಮೂಡಿ ವಿರಕ್ತಮಠ, ಹಾಗೂ ಹುಬ್ಬಳ್ಳಿ ಮೂರುಸಾವಿರಮಠ ಮತ್ತು ಹಿಮಾಲಯದ ಕೆಲವು ಆಶ್ರಮಗಳಲ್ಲಿ ಅಧ್ಯಯನ ಗ್ರಂಥ ಬಗ್ಗೆ ಪಾಂಡಿತ್ಯ ಹೊಂದಿದರು. ಚಿಕ್ಕವಯಸ್ಸಿನಲ್ಲೇ ಪ್ರವಚನದಲ್ಲಿ ಪಾಂಡಿತ್ಯ ಹೊಂದಿದ ಅವರು 13ನೇ ವಯಸ್ಸಿನಲ್ಲಿ ಕುಷ್ಟಗಿ ತಾಲೂಕ ದೋಟಿಹಾಳ, ಹುಬ್ಬಳ್ಳಿ ತಾಲೂಕ ಗಬ್ಬೂರ ಮತ್ತು ಸೂರಬದಲ್ಲಿ ಅಪಾರ ಭಕ್ತರ ಮನ ಗೆದ್ದವರು.

ಉತ್ತರಾಧಿಕಾರಯಾಗಿ ಸ್ವೀಕಾರ ಹಾಗೂ ಪೀಠಾಧಿಪತ್ಯ
ಗದಗ ಜಿಲ್ಲೆಯ ಮುಂಡರಗಿ, ಲಿಂಗನಾಯಕನಹಳ್ಳಿ, ಹುಬ್ಬಳ್ಳಿ ಡಾ ಮೂಜಗರ, ಹೂವಿನ ಹಡಗಲಿ, ಮತ್ತು ಮುಳ ಸ್ವಾಮಿಗಳಿಂದ (ಅಂದಿನ ಶಿರಹಟ್ಟಿ ತಾಲೂಕ) ಬಾಳೇಹೊಸೂರ ಗ್ರಾಮದ ಶ್ರೀ ದಿಂಗಾಲೇಶ್ವರ ವಿರಕ್ತಮಠಕ್ಕೆ 30-04-1994 ಪೀಠಕ್ಕೆ ಆದರು.

1995ರ ಏ. 20ರಂದು ಶ್ರೀ ದಿಂಗಾಲೇಶ್ವರಮಠದ ಆರನೇಯ ಮಠಾಧಿಪತಿ ಆಗಿ ನಂತರ ಅನೇಕ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯ ಮಾಡಿದರು. ಭಕ್ತರ ದೇಣಿಗೆ, ಪ್ರವಚನ ಸಂಭಾವನೆ, ಮತ್ತು ಜನಪ್ರತಿನಿಧಿಗಳ ಅನುದಾನ ಪಡೆದು ಶ್ರೀ ಮಠದ ಸಮಗ್ರ ಅಭಿವೃದ್ಧಿ ಬೃಹತ್ ಶಿಲಾ ಕಟ್ಟಡಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡರು.

ಕೃಷಿ ಕಾಯಕ, ಗೋಶಾಲೆ, ಕುಮಾರೇಶ್ವರ ಪತ್ತಿನ ಸಹಕಾರ ಸಂಘ ಸ್ಥಾಪನೆ
ಹತ್ತು ಸಾವಿರಮರಗಳನ್ನು ಬೆಳೆಸಿದ್ದು ಶ್ರೀ ಮಠದ ಕೃಷಿ ಭೂಮಿಯಲ್ಲಿ ಹಾಗೂ ಇತರ ಬೆಳೆ ಬೆಳೆದಿದ್ದು ಸಾವಯವ ಕೃಷಿಯಾಧಾರಿತ. ‘ಗೋ ಶಾಲೆ’ ಮಲೆನಾಡಗಿಡ್ಡ, ಅಮೃತಮಹಲ್, ಹಳ್ಳಿಕಾರ, ಕಿಲಾರಿ ಹೀಗೆ ವಿವಿಧ ಜಾತಿಯ 200ಕ್ಕೂ ಹೆಚ್ಚು ದೇಶಿ ಗೋ ಸಂವರ್ಧನೆ ಹಾಗೂ ಸಂರಕ್ಷಣೆ ಪ್ರಾರಂಭ ಮಾಡಿದರು. ಗ್ರಾಮೀಣ ಭಾಗದ ಜನರು ಹೆಚ್ಚಿನ ಬಡ್ಡಿ ಹಣಕಟ್ಟಿ ಬಳಲುವುದನ್ನು ಸಹಕಾರಿ ಸಂಘ.ನಿ. ತಪ್ಪಿಸಲಿಕ್ಕಾಗಿ ಶ್ರೀ ಕುಮಾರೇಶ್ವರ ಪತ್ತಿನ ಸಹಕಾರಿ ಸಂಘ ಸ್ಥಾಪಿಸಿ ಗ್ರಾಮೀಣ ಜನರ ಆರ್ಥಿಕ ಅಭಿವೃದ್ಧಿ ಕಾರ್ಯ ಮಾಡುತ್ತಿರುವುದು.
ಕಲ್ಯಾಣ ಮಂಟಪ
ಅಂದಾಜು 2 ಕೋಟಿ ಹಣದಿಂದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪ ನಿರ್ಮಾಣ ಮಾಡಿ ಗ್ರಾಮೀಣರ ಮದುವೆ, ಇತ್ಯಾದಿ ಕಾರ್ಯಕ್ರಮಗಳನ್ನು ಮಾಡಿದರು.

ಬಾಳೇಹೊಸೂರು, ಜಿಲ್ಲೆಯ ಕಡೆಯ ಗ್ರಾಮ ಅತ್ಯಂತ ಹಿಂದುಳಿದದ್ದು ಚುನಾಯಿತ ಪ್ರತಿನಿಧಿಗಳ, ಮತ್ತು ಗ್ರಾಮಸ್ಥರ ಮನವೊಲಿಸಿ ರಸ್ತೆ, ಚರಂಡಿ ,ಬ್ಯಾಂಕ, ಶಾಲೆ, ಆಸ್ಪತ್ರೆ ಶುದ್ದಕುಡಿವನೀರು, 24 ತಾಸು ಕರೆಂಟಿ, ಶೌಚಾಲಯ, ನೀರಾವರಿ ಅಭಿವೃದ್ಧಿಗಾಗಿ ಕೆರೆ ತುಂಬಿಸುವ ಯೋಜನೆಗೆ ಸಹಕಾರ ಮತ್ತು ಪ್ರಯತ್ನ ಮಾಡಿದರು.
ಸಾಮಾಜಿಕ ಸೇವೆ
ಗ್ರಾಮದ ಬಹು ಸಂಖ್ಯಾತ ಓದ ಬಯಸುವ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ತರುಣ ತರುಣಿಯರಿಗೆ ಆರ್ಥಿಕ ಸಹಾಯ ನೀಡಿ ಓದುವಂತೆ ಬೇರೆ ಬೇರೆ ಜೀವನ ಮೌಲ್ಯ ತುಂಬಿದ್ದು ನಗರಗಳಲ್ಲಿ ಊಟ, ವಸತಿ ವ್ಯಸಸ್ಥೆ ಕಲ್ಪಿಸಿದ್ದು,ರಾಜ್ಯದ ವಿವಿಧ ಮತ್ತು ಬೇರೆ ಜಿಲ್ಲೆಗಳ ನಿರುದ್ಯೋಗದಲ್ಲಿ ಬಳಲುವ ತರುಣ ತರುಣಿಯರಿಗೆ, ಕೃಷಿ, ಹೈನುಗಾರಿಕೆ, ಕೈಗಾರಿಕೆ, ವ್ಯಾಪಾರ, ನೌಕರಿ ಸ್ವ ಉದ್ಯೋಗಕ್ಕೆ ಆಸರೆ ಆದರು.
ಇದರ ಜೊತೆ ಜೊತೆಯಲ್ಲಿ “ದುಶ್ಚಟಗಳ ಭೀಕ್ಷೆ ಸದ್ಗುಣಗಳ ದೀಕ್ಷೆ ಈ ಶಿರೋನಾಮೆಯಲ್ಲಿ ರಾಜ್ಯದ ನಿರ್ಮಾಣಕ್ಕೆ ಪಾದಯಾತ್ರೆ ಮೂಲೆ ಮೂಲೆಗಳಲ್ಲಿ ಹಳ್ಳಿ ಪಟ್ಟಣಗಳಲ್ಲಿ ವ್ಯಸನಗಳ ನಿರ್ಮೂಲನೆಗೆ ಶ್ರಮಿಸಿದ್ದು, ಅಂತವರ ಬಾಳಿಗೆ ಬೆಳಕಾಗಿದ್ದು, ಏಕಕಾಲಕ್ಕೆ 115 ಹಳ್ಳಿಗಳಲ್ಲಿ ಪಾದಯಾತ್ರೆ ಮಾಡಿ ಜನ ಜಾಗ್ರತಿ ಮಾಡಿದ್ದು, ಊರಿಗೊಂದು ದೇವಾಲಯ ಮನೆಗೊಂದು ಸೌಚಾಲಯ ನಿಟ್ಟಿನಲಿ ಸ್ವಚ್ಛ ಭಾರತಕ್ಕೆ ಶ್ರಮಿಸಿದರು.

ರಾಜ್ಯದ ಲಿಂಗಾಯತ ಹಾಗೂ ಇತರ ಸಮಾಜಗಳ ಮಠ ಮತ್ತು ದೇವಾಲಯಗಳ ನಿರ್ಮಾಣಕ್ಕೆ ಸಹಾಯ ಸಹಕಾರ ನೀಡಿ ಶ್ರಮಿಸಿದ್ದು ನೂರಾರು ದೇವಾಲಯಗಳ ಹತ್ತಾರು ಮಠಗಳ ಅಭಿವೃದ್ಧಿಯಲ್ಲಿ ಸಿಂಹಪಾಲು ಸೇವೆಸಲ್ಲಿಸಿದ್ದು ಮತ್ತು ಬೇರೆ ಮಠಗಳ ಆರ್ಥಿಕ ಸಾಮಾಜಿಕ ಅಭಿವೃದ್ಧಿ ಮಾಡಿದರು.
ಆಧ್ಯಾತ್ಮ ಕ್ರಾಂತಿ
ಜೀವನ ದರ್ಶನ, ಅನುಭಾವ ದರ್ಶನ, ವಚನ ದರ್ಶನ, ಮತ್ತು ಕೈವಲ್ಯ ತತ್ತ್ವರಸಾಮೃತ ಹೀಗೆ ವಿವಿಧ ಶಿರೋನಾಮಗಳ ಮೂಲಕ, ಬಮ್ಮನಹಳ್ಳಿ, ಅಕ್ಕಿಆಲೂರ, ಶಿರಶಿ, ನರಗುಂದ, ಚಿಕ್ಕೇರೂರ, ಹಿರೇಕೆರೂರ, ಬ್ಯಾಡಗಿ, ಮುಳ್ಳಳ್ಳಿ, ಹಾವೇರಿ ಮಾದನ ಹಿಪ್ಪರಗಿ, ಅಕ್ಕಲಕೋಟಿ, ಹನಮಸಾಗರ, ಜಾಲಿಹಾಳ, ಶಿವಯೋಗಮಂದಿರ ಮತ್ತು ಹುಬ್ಬಳ್ಳಿ ನೇಹರು ಮೈದಾನಗಳಲ್ಲಿ ರಾಜ್ಯದ ಜನ ಮತ್ತು ನಾಯಕರು ಮಠಾಧೀಶರು ಗಾಬರಿಯಾಗುವಂತಹ ನೂರಾರು ಪ್ರವಚನ ಮತ್ತು ಸಭೆ ಸಮಾರಂಭಗಳನ್ನು ಐತಿಹಾಸ ನಿರ್ಮಿಸುವಂತೆ ಮಾಡಿದ್ದು.
ಸಹಭೋಜನ
ಪ್ರತಿಯೊಂದು ಕಡೆ ಪ್ರವಚನ ಮಂಗಲಕ್ಕೆ ಹೆಡಿಗೆಪರ್ವ ಈ ಹೆಸರಿನಲ್ಲಿ ಎಲ್ಲ ಜಾತಿಯವರು ತಯಾರಿಸಿಕೊಂಡು ಬಂದ ಪ್ರಸಾದ ಕಡೆ ಸಂಗ್ರಹಿಸಿ ಆ ಪ್ರಸಾದ ಸರ್ವರಿಗೂ ಉಣಿಸುವ ಮೂಲಕ ಜಾತಿ, ಮೇಲುಕೀಳು ಈ ಸಾಮಾಜಿಕ ಪಿಡುಗು ನಾಶಮಾಡಲು ಪ್ರಯತ್ನಿಸಿದರು.

ಗಣ್ಯರ ಸಂಪರ್ಕ ವಿವಿಧ ಧರ್ಮ ಮತ್ತು ಜಾತಿಗಳ ಮಠಾಧಿಪತಿಗಳ ಹೊರ ರಾಜ್ಯದ, ಅಂತರಾಷ್ಟ್ರೀಯ ಮಟ್ಟದ ಸಾಧು ಸನ್ಯಾಸಿಗಳ ಆತ್ಮೀಯ ಸಂಬಂಧ ಹೊಂದಿರುತ್ತಾರೆ. ಬಿ ಡಿ ಜತ್ತಿ, ಜೆ.ಎಚ್ ಪಟೇಲ್, ಎಸ್. ಬಂಗಾರಪ್ಪರಿಂದ ಹಿಡಿದು ಇಂದಿನ ಎಲ್ಲ ಪಕ್ಷಗಳ ನಾಯಕರು ನಿಕಟ ಸಂಪರ್ಕ ಪಕ್ಷಾತೀತವಾಗಿ ರಾಜಕೀಯ ನಾಯಕರು ಶ್ರೀಮಠಕ್ಕೆ ಆಗಮಿಸಿ ದರ್ಶನ, ಆಶೀರ್ವಾದ ಪಡೆದಿದ್ದಾರೆ.

ವೀರಶೈವ ಲಿಂಗಾಯತ ವಿವಾದದಲ್ಲಿ ಪಾತ್ರ
ಕರ್ನಾಟಕದಲ್ಲಿ ವೀರಶೈವ ಲಿಂಗಾಯತರು ಅತ್ಯಂತ ಪ್ರಮುಖರು ಹಿಂದಿನಿಂದಲೂ ಒಳಪಂಗಡಗಳು ಮತ್ತು ತಾತ್ವಿಕ ಬಿನ್ನಾಭಿಪ್ರಾಯಗಳು ಇದ್ದೆ ಇವೆ.ಆದರೆ ಇದರಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕು ಎಂಬ ಕೆಲವು ಮಠಾಧೀಶರ ವಾದಕ್ಕೆ ಉತ್ತರವಾಗಿ ರಾಜಕೀಯ ನಾಯಕರ ಸಮಾವೇಶ, ಸುದ್ದಿಗೋಷ್ಠಿ, ಪಾದಯಾತ್ರೆಗಳ ಮೂಲಕ ಸಮಾಜ ಒಡೆಯದಂತೆ ಒಂದೇಯಾಗಿ ಉಳಿಯುವಲ್ಲಿ ನಿರಂತರ ಶ್ರಮಿಸಿದ್ದು, ಗುರು ವಿರಕ್ತರಲ್ಲಿ ಸಮಾನತೆಯಿಂದ ನಡೆದು ಬಂದದ್ದಲ್ಲದೆ ಆರೋಢ ಸಂಪ್ರದಾಯದ ಮಠಗಳ ನಿಕಟ ಸಂಪರ್ಕ ಸಾಧಿಸಿ ಸಮಾನತೆಗಾಗಿ ಇಂದಿಗೂ ಶ್ರಮಿಸುತ್ತಿದ್ದಾರೆ.
ಪೂಜ್ಯರ ಅಭಿಪ್ರಾಯಗಳು ದಿಲ್ಲಿ ಮಟ್ಟದಲ್ಲಿ ಚರ್ಚೆಯಾಗಿದ್ದೂ ವಿಶೇಷ,

ರಾಜಕೀಯ ಪಕ್ಷಗಳು ಇಟ್ಟ ಹೆಜ್ಜೆಯಲ್ಲಿ ತಮಗೆ ಸರಿಕಾಣದ್ದನ್ನು ಖಂಡಿಸಿ ತಮ್ಮ ಅಭಿಪ್ರಾಯ ಮಂಡಿಸುವಲ್ಲಿ ಪೂಜ್ಯರು ಮೊನ್ನೆ 500 ಕ್ಕೂ ಹೆಚ್ಚು ಮಠಾದೀಶರನ್ನು ಬೆಂಗಳೂರ ಅರಮನೆ ಮೈದಾನದಲ್ಲಿ ಕರೆ ಕೊಟ್ಟು ವರ್ತಮಾನದ ಸಮಸ್ಯೆಗಳು ಮತ್ತು ಪರಿಹಾರ ಈ ವಿಚಾರವಾಗಿ ಮಠಾಧೀಶರ ಮಹಾ ಸಮಾವೇಶ ಮಾಡಿದರು.
ಯಡಿಯೂರಪ್ಪ ಪರ ಹೋರಾಟ
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನ‌ ಭಾರತೀಯ ಜನತಾ ಪಕ್ಷ ಮುಖ್ಯಮಂತ್ರಿ ಸ್ಥಾನದಿಂದ ಇಳಿಸದ ಸಂದರ್ಭದಲ್ಲಿ ಯಡಿಯೂರಪ್ಪ ಪರ ನಿಂತು ನಾಡಿನ ಲಿಂಗಾಯತ ಧರ್ಮದ ಸ್ವಾಮೀಜಿಯವರನ್ನ ಕಟ್ಟಿಕೊಂಡು ಹೋರಾಟಕ್ಕೆ ಇಳಿದಿದ್ದರು.

ಅಂದು ಯಡಿಯೂರಪ್ಪ ಅವರ ಕಣ್ಣೀರಿನಲ್ಲಿ ಬಿಜೆಪಿ ಸರ್ಕಾರ ಕೊಚ್ಚಿ ಹೋಗತ್ತೆ ಅಂತ ಸಹ ಹೇಳಿದ್ದರು. ಬಿ.ಎಸ್ ಯಡಿಯೂರಪ್ಪ ಅವರು ಎಲ್ಲರಿಗೂ ಬೇಕಾದ ನಾಯಕರು. ಅವತ್ತು ಎಲ್ಲ ಸಮಾಜದ ನಾಯಕರು ಬಿ.ಎಸ್ ಯಡಿಯೂರಪ್ಪ ಅವರನ್ನು ಮುಂದುವರೆಸಬೇಕು ಎಂದಿದ್ದು ಒತ್ತಾಯ ಮಾಡಿ ಗಮನ ಸೆಳೆದಿದ್ದರು.

ಹುಬ್ಬಳ್ಳಿಯ ಮೂರುಸಾವಿರ ಪೀಠಕ್ಕೆ ಏರಲು ಅನೇಕ ಹೋರಾಟ ಮಾಡಿದರು. ಇದು ಸಾಕಷ್ಟು ವಿವಾದಕ್ಕೆ ಸಹ ಗುರಿಯಾಯಿತು‌.
ಶಿರಹಟ್ಟಿಯ ಫಕೀರ ಮಠಕ್ಕೆ ಪೀಠದ ಉತ್ತರಾಧಿಕಾರಿ
ಬಾಳೆಹೊಸೂರು ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿಗಳು, ಶಿರಹಟ್ಟಿಯ ಶ್ರೀ ಜಗದ್ಗುರು ಫಕ್ಕೀರೇಶ್ವರ ಮಠಕ್ಕೆನಂತರ ಅವರನ್ನ 2022 ರಂದು ಉತ್ತರಾಧಿಕಾರಿಯಾಗಿ ನೇಮಕವಾದರು. ಅಪಾರ ಭಕ್ತರು ಹಾಗೂ ವಿವಿಧ ಸ್ವಾಮೀಜಿಗಳ ನೇತೃತ್ವದಲ್ಲಿ ಸಂಪ್ರದಾಯ ಬದ್ಧವಾಗಿ ಉತ್ತರಾಧಿಕಾರಿ ನೇಮಕ ಮಾಡಲಾಯಿತು.

ಪಟ್ಟಾಧ್ಯಕ್ಷರಾದ ಶ್ರೀ ಫಕ್ಕೀರೇಶ್ವರ ಸಿದ್ದರಾಮ ಮಹಾಸ್ವಾಮಿಗಳು ಕರ್ತೃ ಗದ್ದುಗೆ ಪ್ರೇರಣೆಯಂತೆ ಅವರನ್ನು ನೇಮಕ ಮಾಡಲಾಗಿದ್ದು ಅಂದಿನಿಂದ ಕೋಮಸೌಹಾರ್ಧದ ಪ್ರತೀಕವಾದ ಶಿರಹಟ್ಟಿ ಫಕೀರೇಶ್ವರರ ಮಠದ ಪೀಠಾಧಿಕಾರಿಯಾಗಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author