ಧಾರವಾಡ ಲೋಕಸಭೆ,ಬಿಜೆಪಿ ಅಬ್ಯೆರ್ಥಿ ಪ್ರಹ್ಲಾದ ಜೋಶಿ ನಾಮಪತ್ರ.ಯುವ ಮುಖಂಡ ಅನೂಪಕುಮಾರ ನೇತೃತ್ವದಲ್ಲಿ ಭರ್ಜರಿ ಬೈಕ್ ರ್ಯಾಲಿ.
ಹುಬ್ಬಳ್ಳಿ:- ಧಾರವಾಡ ಲೋಕಸಭೆ ಅಬ್ಯೆರ್ಥಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಿಂದ ನೂರಾರು ಬೈಕ್ ಗಳೊಂದಿಗೆ ಧಾರವಾಡಕ್ಕೆ ತೆರಳಿದ ಯುವ ಮುಖಂಡ ಅನೂಪಕುಮಾರ ಜೋಶಿ ಅವರ ನಾಮಪತ್ರ ಸಲ್ಲಿಸುವ ವೇಳೆ ಭರ್ಜರಿ ಬೈಕ್ ರ್ಯಾಲಿ ನಡೆಸಿದರು.
ಹುಬ್ಬಳ್ಳಿಯಿಂದ ಧಾರವಾಡದವರೆಗೆ ನೂರಾರು ಬೈಕಗಳೊಂದಿಗೆ ತೆರಳಿದ ಅನೂಪಕುಮಾರ ಜೋಶಿ ಅವರ ಮೆರವಣಿಗೆಯಲ್ಲಿ ಪಾಲ್ಗೊಂಡು ಕಾರ್ಯಕರ್ತರಲ್ಲಿ ಹುಮ್ಮಸ್ಸು ಇಮ್ಮಡಿಗೊಳಿಸಿದರು.
ಬೈಕ್ ಅಷ್ಟೇ ಅಲ್ಲದೇ ನೂರಾರು ಮಹಿಳಾ ಕಾರ್ಯಕರ್ತರು ಹಾಗೂ ಅಪಾರ ಜನರೊಂದಿಗೆ
ಧಾರವಾಡಕ್ಕೆ ತೆರಳಿದ ಅನೂಪಕುಮಾರ ಪಕ್ಷದ ಬಾವುಟಗಳನ್ನು ಹಿಡಿದು ಮೆರವಣಿಗೆಯ ಕಳೆಯನ್ನು ಹೆಚ್ಚಿಸಿದರು.