ಮೃತ ನೇಹಾ ಹಿರೇಮಠ ಅವರ ಮನೆಗೆ ವೀರಶೈವ ಲಿಂಗಾಯತ ಮುಖಂಡರುಗಳ ನಿಯೋಗ.ಕುಟುಂಬಸ್ಥರಿಗೆ ಸಾಂತ್ವನ.
ಹುಬ್ಬಳ್ಳಿ :- ಮೃತ ನೇಹಾ ಹಿರೇಮಠ ಅವರ ಮನೆಗೆ ಶರಣರ ಸಮ್ಮುಖದಲ್ಲಿ ವೀರಶೈವ ಲಿಂಗಾಯತ ಮುಖಂಡರುಗಳ ನಿಯೋಗವು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು,
ನಿಧನ ಹೊಂದಿದ ನೇಹಾನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸಿದರಲ್ಲದೆ ಶ್ರೀಯುತರ ಕುಟುಂಬಸ್ಥರ ದುಃಖದಲ್ಲಿ ಎಲ್ಲರೂ ಭಾಗಿಯಾಗಿ ದುಃಖ ವ್ಯಕ್ತಪಡಿಸಿದರು, ನೇಹಾನ ಕೊಲೆಗೆ ತೀವ್ರವಾಗಿ ಖಂಡಿಸಿದರಲ್ಲದೆ, ಕೊಲೆ ಮಾಡಿದ ವ್ಯಕ್ತಿಗೆ ಕಾನೂನು ಚೌಕಟ್ಟಿನ ಅಡಿಯಲ್ಲಿ ಕಠಿಣವಾದ ಉಗ್ರ ಶಿಕ್ಷೆಯನ್ನು ನೀಡಬೇಕು ಹಾಗೂ ಇಂತಹ ಘಟನೆಗಳು ಮರು ಕಳಸದಂತೆ ರಾಜ್ಯ ಸರ್ಕಾರವು ಪೋಲಿಸ್ ಇಲಾಖೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಕ್ತ ನಿರ್ದೇಶನ ನೀಡಬೇಕೆಂದು ಮಾಜಿ ಶಾಸಕ ಮೋಹನ್ ಲಿಂಬಿಕಾಯಿ ಸೇರಿದಂತೆ ಅನೇಕ ಮುಖಂಡರು ಒತ್ತಾಯಿಸಿದ್ದಾರೆ.
ಮುಖಂಡರುಗಳಾದ ರಾಜಶೇಖರ ಮೆಣಸಿನಕಾಯಿ ಬಂಗಾರೇಶ್ ಹಿರೇಮಠ್ ಡಾ ಶರಣಪ್ಪ ಕೋಟಿಗಿ ಸುರೇಶ್ ಸವನೂರು ಪ್ರಕಾಶ್ ಗೌಡ ಪಾಟೀಲ್ ವೀರಶೈವ ಲಿಂಗಾಯತ ಒಳಪಂಗಡ ಒಕ್ಕೂಟದ ಜಿಲ್ಲಾಧ್ಯಕ್ಷ ಶಂಕರಣ್ಣ ನೇಗಿನಹಾಳ ಎಂ ಪಿ ಶಿವಕುಮಾರ ಮಹಾಂತೇಶ್ ಮಠದ, ಶಂಭು ಪಿ ಸಿ ಕಮ್ಮಾರ ಮುಂತಾದವರು ಆಗಮಿಸಿದ್ದರು