ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ 50 ಲಕ್ಷ ಹಣ ವಶ.ವಿಜಯಪುರ ಮನಗೂಳಿ ಚೆಕ್ ಪೋಸ್ಟನಲ್ಲಿ ಹಣ ಸೀಜ್.
ವಿಜಯಪುರ:- ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಐವತ್ತು ಲಕ್ಷ ಹಣವನ್ನು ವಿಜಯಪುರ ಮನಗೂಳಿ ಚೆಕ್ ಪೋಸ್ಟನಲ್ಲಿ ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ವಿಜಯಪುರದಿಂದ ಕಾರಿನಲ್ಲಿ ಅಜ್ಜಂಪುರದ ಕಡೆ ಹೊರಟಿದ್ದ ಕೆಎ 18 M 6462 ನಂಬರಿನ ಕಾರನ್ನು ಚೆಕ್ ಪೋಸ್ಟನಲ್ಲಿ ಚುನಾವಣಾಧಿಕಾರಿಗಳು ತಪಾಸಣೆ ನಡೆಸಿದಾಗ ದಾಖಲೆ ಇಲ್ಲದ ಐವತ್ತು ಲಕ್ಷ ನಗದು ಹಣ ಸಿಕ್ಕಿದೆ.
ಮೂವರನ್ನು ವಶಕ್ಕೆ ಪಡೆದ ಅಧಿಕಾರಿಗಳು ಹಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಿದ್ದಾರೆ.