ದಿಂಗಾಲೇಶ್ಚರ ಶ್ರೀಗಳು ನಾಮಿನೇಷನ್ ವಾಪಸ್ಸ.!!ಶ್ರೀಗಳ ಮನವೊಲಿಸಿದ್ದು ಕಾಂಗ್ರೆಸ್ಸಾ/ಬಿಜೆಪಿನಾ.ಶ್ರೀಗಳ ಮುಂದಿನ ನಡೆ ಏನು.?
ಹುಬ್ಬಳ್ಳಿ:-ಧಾರವಾಡ ಲೋಕಸಭೆ ಅಖಾಡವನ್ನು ರಂಗೇರುವಂತೆ ಮಾಡಿದ್ದ ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಇಂದು ತಮ್ಮ ನಾಮಪತ್ರ ವಾಪಸ್ಸು ಪಡೆಯಲಿದ್ದಾರೆ.
ಹೌದು ಈಗಾಗಲೇ ಧಾರವಾಡ ಜಿಲ್ಲೆಯ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಮೂಲಕ ರಾಜ್ಯ ನಾಯಕರು ದಿಂಗಾಲೇಶ್ವರ ಶ್ರೀಗಳ ಮನವೊಲಿಸುವ ಪ್ರಯತ್ನ ಸಕ್ಷಸ್ ಆಗಿದೆ ಎನ್ನಲಾಗಿದೆ.
ನಾಳೆ ನಾಮಪತ್ರ ವಾಪಾಸ್ಸು ಪಡೆಯಲು ಕೊನೆ ದಿನವಾಗಿದ್ದರಿಂದ ಈ ಬೆಳವಣಿಗೆ ನಡೆದಿದ್ದು ನಿನ್ನೆ ತಡ ರಾತ್ರಿವರೆಗೂ ದಿಂಗಾಲೇಶ್ವರ ಶ್ರೀಗಳು ತಮ್ಮ ಜೊತೆಗಿದ್ದ ಮಠಾಧೀಶರು ಹಾಗೂ ಭಕ್ತರೊಂದಿಗೆ ಚರ್ಚಿಸಿ ನಾಮಪತ್ರ ವಾಪಾಸ್ಸು ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಇನ್ನೊಂದು ಮೂಲದ ಪ್ರಕಾರ ಶಿರಹಟ್ಟಿಯ ಪೀಠಾಧಿಪತಿಗಳ ಮಾತಿಗೆ ತಲೆಬಾಗಿ ನಾಮಪತ್ರ ವಾಪಸ್ಸು ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಇನ್ನೂ ದಿಂಗಾಲೇಶ್ವರ ಶ್ರೀಗಳು ಇಂದು ನಾಮಪತ್ರ ವಾಪಸ್ಸು ಪಡೆದಿದ್ದೇ ಆದರೆ ಧಾರವಾಡ ಲೋಕಸಭೆ ಅಖಾಡಾ ಮತ್ತೆ ಯಾವ ದಿಕ್ಕಿನೆಡೆಗೆ ಹೋಗಲಿದೆ ಎಂಬುವುದೇ ಕುತೂಹಲವಾಗಿದೆ.
ದಿಂಗಾಲೇಶ್ವರ ಶ್ರೀಗಳೇ ನೀವೊಬ್ಬ ಮಠಾಧೀಶರಾಗಿ ರಾಜಕೀಯ ಎಂಟ್ರಿ ಮಾಡುವಾಗ ಮಾತನಾಡಿದ ಕೆಲವು ಮಾತುಗಳಿಗೆ ಅಂದರೆ ನನ್ನನ್ನು ಚುನಾವಣೆಯಿಂದ ಹಿಂದೆ ಸರಿಸಲು ಈ ಭೂಮಿ ಮೇಲೆ ಇನ್ನೂ ಯಾರೂ ಹುಟ್ಟಿಲ್ಲಾ.ನಾನು ನನ್ನ ಆಸೆ ಈಡೇರುವವರೆಗೂ ಮಾಲೆ ಹಾಕಲ್ಲಾ.ಹೀಗೆ ನೀವೇ ಮಾತಾನಾಡಿದ ಈ ಹೇಳಿಕೆಗಳಿಗೆ ಈಗ ನಿಮ್ಮ ಉತ್ತರವೇನು ಸ್ವಾಮಿಗಳೇ ?