ನೇಹಾ ಹತ್ಯೆ ಪ್ರಕರಣ. ಹುಬ್ಬಳ್ಳಿಗೆ ಬಂದಿಳಿದ ಸಿಐಡಿ ತಂಡ.ಎಸ್ಪಿ ವೆಂಕಟೇಶ ನೇತೃತ್ವದ ತಂಡದಿಂದ ತನಿಖೆ ಆರಂಭ.
ಹುಬ್ಬಳ್ಳಿ:-ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ನಿನ್ನೆ ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದ್ದೇ ತಡ.ತಡ ರಾತ್ರಿ ಎಸ್ಪಿ ವೆಂಕಟೇಶ ನೇತ್ರತ್ವದ ತಂಡ ಹುಬ್ಬಳ್ಳಿಗೆ ಬಂದಿದ್ದು ಬೆಳಿಗ್ಗೆಯಿಂದಲೇ ತನಿಖೆ ಆರಂಭಿಸಿದೆ.
ಸಿಐಡಿ ತಂಡದಲ್ಲಿ DYSP ದರ್ಜೆಯ ಅಧಿಕಾರಿ ಸೇರಿ ಎಂಟು ಜನ ಸಿಬ್ಬಂದಿಗಳ ತಂಡದಿಂದ ತನಿಖೆ ಆರಂಭವಾಗಿದೆ.ಕೊಲೆಯಾದ ಸ್ಥಳ ಸೇರಿದಂತೆ ವಿದ್ಯಾನಗರ ಪೋಲೀಸ ಠಾಣೆಗೆ ಭೇಟಿ ನೀಡಿದ ತಂಡ ಸಮಗ್ರ ತನಿಖೆ ಆರಂಭಿಸಿದೆ.
ಈಗಾಗಲೇ ಕೃತ್ಯ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ,ಕೃತ್ಯಕ್ಕೆ ಬಳಸಿದ ಚಾಕು,ಕೊಲೆಯಾದ ನೇಹಾಳ ರಕ್ತದ ಮಾದರಿ,ಆರೋಪಿ ಫಯಾಜನ ರಕ್ತದ ಮಾದರಿ,ಬಟ್ಟೆಗಳನ್ನು ಸಂಗ್ರಹಿಸಿ ಸ್ಥಳಿಯ ವಿದ್ಯಾನಗರ ಪೋಲೀಸರು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.