ಸಿಐಡಿ ತಂಡ ನೇಹಾ ಹಿರೇಮಠ ಮನೆಗೆ ಭೇಟಿ.ತಾಯಿ ಗೀತಾ ಹೇಳಿಕೆ ಪಡೆದ ಸಿಐಡಿ ಟೀಮ್.
ಹುಬ್ಬಳ್ಳಿ:-ನಿನ್ನೆಯಿಂದ ತನಿಖೆ ನಡೆಸಿರುವ ಸಿಐಡಿ ಎಡಿಜಿಪಿ ಬಿ.ಕೆ ಸಿಂಗ್ ಹಾಗೂ ಎಸ್ಪಿ ವೆಂಕಟೇಶ ನೇತೃತ್ವದ ತಂಡ ಇಂದು ನೇಹಾ ಹಿರೇಮಠ ಅವರ ಮನೆಗೆ ಭೇಟಿ ನೀಡಿ ನೇಹಾ ಅವರ ತಾಯಿ ಗೀತಾ ಅವರ ಹೇಳಿಕೆ ಪಡೆದಿದೆ.
ಈಗಾಗಲೇ ವಿದ್ಯಾನಗರ ಪೋಲಿಸ್ ಠಾಣೆ,ಕೊಲೆ ನಡೆದ ಬಿವಿಬಿ ಕಾಲೇಜು ಸ್ಥಳ ಮಹಜರು ನಡೆಸಿದ ಸಿಐಡಿ ತಂಡ ಇಂದು ನೇಹಾ ಹಿರೇಮಠ ಮನೆಗೆ ಭೇಟಿ ನೀಡಿ ತನಿಖೆ ನಡೆಸಿದೆ.