ಹುಬ್ಬಳ್ಳಿ
ಅಂದು ನಾಡ ವಿರೋಧಿ ಟಿಪ್ಪುವಿನ ವಿಜೃಂಭಣೆ ಇಂದು ರಾಷ್ಟ್ರ ವಿರೋಧಿ ಔರಂಗಜೇಬನ ವಿಜೃಂಭಣೆ, ಎತ್ತ ಸಾಗುತ್ತಿದೆ ಕರ್ನಾಟಕ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟ್ವೀಟ್ ಮೂಲಕ ರಾಜ್ಯ ಸರಕಾರದ ವಿರುದ್ದ ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಘಟನೆಗೆ ನೇರವಾಗಿ ರಾಜ್ಯ ಕಾಂಗ್ರೆಸ್ ಸರಕಾರ ಬೆಂಬಲವಾಗಿ ನಿಂತಿದೆ ಮತ್ತು ಕರ್ನಾಟಕವನ್ನು ಗೂಂಡಾರಾಜ್ಯ ಮಾಡಲು ಪಣತೊಟ್ಟಂತಿದೆ
ಕಾಂಗ್ರೆಸ್ ಆಡಳಿತದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ
ಹಿಂದೂಗಳ ಹಬ್ಬಕ್ಕೆ ನಿರ್ಬಂಧ – ಮತಾಂಧ ಶಕ್ತಿಗಳ ಅಟ್ಟಹಾಸಕ್ಕೆ(ಮೆರವಣಿಗೆಗೆ) ಬೆಂಬಲ.ಮತಾಂಧ ಶಕ್ತಿಗಳನ್ನು ಪೋಷಿಸಿ ಬೆಳೆಸಲೆಂದೇ ಅಧಿಕಾರಕ್ಕೆ ಬಂದ ಸರಕಾರವಿದು ಎಂದು ಟ್ವೀಟ್ ಮಾಡಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ