ಚಿಕ್ಕಬಳ್ಳಾಪುರ : ಸೇವೆಯಿಂದ ಅಮಾನತ್ತು ಮಾಡಿರುವುದನ್ನು ಖಂಡಿಸಿ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳು ಕುಟುಂಬ ಸಮೇತರಾಗಿ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಅಣಕನೂರು ಬಳಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿ ಎದುರು ಅಂಬೇಡ್ಕರ್ ಫೋಟೊ ಹಿಡಿದು ಕುಳಿತ ಪೊಲೀಸ್ ಪೇದೆಗಳು, ತಮ್ಮದಲ್ಲದ ತಪ್ಪಿಗೆ ತಮ್ಮನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಪೊಲೀಸ್ ವರಿಷ್ಟಾಧಿಕಾರಿಗಳಿಂದ ಅನ್ಯಾಯವಾಗಿದೆ, ಆರೋಪಗಳ ಮೇಲೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಅಮಾನತು ಮಾಡಿ 6 ತಿಂಗಳಾದರೂ ಆದೇಶ ಹಿಂಪಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.