ಪತಿಗಾಗಿ ರಾತ್ರಿ ಇಡೀ ಹಸುಗೂಸಿನೊಂದಿಗೆ ಕುಳಿತ ಪತ್ನಿ.ಇನ್ನೂ ಬರಲಿಲ್ಲಾ ಪತಿ. ಪೋಲೀಸ ಠಾಣೆ ಮೆಟ್ಟಿಲೇರಿದ ಪತಿ ಪತ್ನಿ ಪ್ರಕರಣ.
ಹುಬ್ಬಳ್ಳಿ:- ಹುಬ್ಬಳ್ಳಿಯ ವಿದ್ಯಾನಗರದ ಮಹ್ಮದಗೌಸ ಮನೆ ಮುಂದೆ ಅವಳ ಪತ್ನಿ ನಿನ್ನೆಯಿಂದ ಪತಿಗಾಗಿ ತನ್ನ ಮಗುವಿನೊಂದಿಗೆ ಧರಣಿ ಆರಂಭಿಸಿದ್ದು ಇಡೀ ರಾತ್ರಿಯೂ ಸಹ ಧರಣಿ ನಡೆಸಿದ್ದಾಳೆ.
ಮೂರು ವರ್ಷದ ಹಿಂದೆ ಹುಬ್ಬಳ್ಳಿಯ ಮಹ್ಮದಗೌಸ ಜೊತೆ ರುಕ್ಷಾನಾ ಮದುವೆ ಆಗಿದ್ದು ಸಂಸಾರ ಕೂಡಾ ಚೆನ್ನಾಗಿಯೇ ಇತ್ತು.ಆದರೆ ರುಕ್ಷಾನಾಗೆ ಒಂದು ಹೆಣ್ಣ ಮಗು ಜನಿಸಿದ ನಂತರ ಪತಿ ಮಹ್ಮದಗೌಸ ತನ್ನ ನವರಂಗಿ ಆಟ ಆರಂಭಿಸಿದ್ದಾನೆ.
ಹೆಣ್ಣು ಮಗು ಆಗಿದೆ ಅನ್ನೋ ಕಾರಣಕ್ಕೆ ಪತ್ನಿಯನ್ನು ತಿರಸ್ಕರಿಸದ್ದು ಈಗ ಪತಿ ನನಗೆ ಬೇಕು ಅಂತಾ ಪತಿಯ ಮನೆಯ ಮುಂದೆ ಧರಣಿ ಆರಂಭಿಸಿದ್ದಾಳೆ ಅಲ್ಲದೇ ನಿನ್ನೆ ರಾತ್ರಿಯೇ ಮಹಿಳಾ ಪೋಲೀಸ ಠಾಣೆಯಲ್ಲಿ ಗಂಡನ ವಿರುದ್ಧ ದೂರು ದಾಖಲು ಮಾಡಿದ್ದಾಳೆ.