ಅಂಜಲಿ ಕೊಲೆ ಪ್ರಕರಣ.ಪೋಲೀಸ ಇಲಾಖೆ ನಿಷ್ಕ್ರಿಯವಾಗಿದೆ ಎಂದ ಬಿಜೆಪಿ ನಾಯಕರು.

Share to all

ಅಂಜಲಿ ಕೊಲೆ ಪ್ರಕರಣ.ಪೋಲೀಸ ಇಲಾಖೆ ನಿಷ್ಕ್ರಿಯವಾಗಿದೆ ಎಂದ ಬಿಜೆಪಿ ನಾಯಕರು.

ಹುಬ್ಬಳ್ಳಿ:- ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಅಂಬಿಗೇರ ಯುವತಿಯ ಕೊಲೆ ಪ್ರಕರಣ ಪೊಲೀಸ್ ಇಲಾಖೆಯ ನಿಷ್ಕ್ರಿಯತೆಗೆ ನಿದರ್ಶನವಾಗಿದೆ ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.

ಕೆಲ ದಿನಗಗಳ ಹಿಂದಷ್ಟೇ ನಗರದ ನೇಹಾ ಹಿರೇಮಠರ ಭೀಕರ ಹತ್ಯೆ ಪ್ರಕರಣ ನಡೆದಿತ್ತು.
ಇದೀಗ ಅಂಜಲಿ ಅಂಬಿಗೇರ ಕೊಲೆ ನಡೆದಿದೆ.
ಇದರಿಂದ ಹೆಣ್ಣು ಹೆತ್ತವರು ಆತಂಕಪಡುವ ಸ್ಥಿತಿ ನಿರ್ಮಾಣ ಆಗಿದೆ.
ವಿದ್ಯಾಭ್ಯಾಸ, ಉದ್ಯೋಗಗಳಿಗೆ ಹೆಣ್ಣು ಮಕ್ಕಳನ್ನು ಕಳಿಸಲು ಹಿಂಜರಿಯುವಂತಾಗಿದೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ನಡೆಯುತ್ತಿರುವ ಯುವತಿಯರ ಕೊಲೆ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ. ನಗರದಲ್ಲಿ ಸಮಾಜ ಘಾತುಕ, ಕಾನೂನು ಬಾಹಿರ ‌ಚಟುವಟಿಕೆಗಳಲ್ಲಿ‌ ತೊಡಗಿರುವವರನ್ನು ಪೊಲೀಸರು ನಿಯಂತ್ರಿಸಲು ಆಸಕ್ತಿ ತೋರಿಸುತ್ತಿಲ್ಲ.
ಶಾಲಾ-ಕಾಲೇಜು, ಮಹಿಳಾ ಉದ್ಯೋಗಿಗಳ ಸ್ಥಳಗಳಲ್ಲಿ ಪೊಲೀಸರು ಕಾಣಿಸಿಕೊಂಡರೆ ಕೆಲವು ಅಹಿತಕರ ಘಟನೆಗಳನ್ನು ತಡೆಯಲು ಸಾಧ್ಯ.
ಆದರೆ, ಪೊಲೀಸರು ಈ ಕೆಲಸ ಮಾಡುತ್ತಿಲ್ಲ.
ಇನ್ನೊಂದೆಡೆ ಪೊಲೀಸ್ ಠಾಣೆಗಳಲ್ಲಿ ಅಕ್ರಮ ದಂಧೆಯಲ್ಲಿ ತೊಡಗಿರುವವರು ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಪೊಲೀಸರ ಮೇಲಿನ ವಿಶ್ವಾಸಕ್ಕೆ ಧಕ್ಕೆ ತರುವಂತಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಕಾನೂನು ಉಲ್ಲಂಘಿಸುವವರಿಗೆ ಯಾವುದೇ ಭೀತಿ ಇಲ್ಲದಂತಾಗಿದೆ.

ಆದ್ದರಿಂದ ಅವಳಿ ನಗರದಲ್ಲಿ ಕಾನೂನು ಮೀರಿ ವರ್ತಿಸುವವರ ಕೃತ್ಯಕ್ಕೆ ಕಡಿವಾಣ ಹಾಕಬೇಕಾದ ಅಗತ್ಯವಿದೆ.
ಪೊಲೀಸ್ ‌ಇಲಾಖೆಯನ್ನು ಇನ್ನಷ್ಟು ಚುರುಕುಗೊಳಿಸಬೇಕು. ಸಮಾಜ ಘಾತುಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಈ ಮುಖಾಂತರ
ಜನತೆ ನಿರ್ಭೀತಿಯಿಂದ
ಜೀವಿಸುವ ವಾತಾವರಣವನ್ನು ಸರಕಾರ ಸೃಷ್ಠಿಸಬೇಕು ಎಂದಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author