ಅಂಜಲಿ ಕೊಲೆ ಆರೋಪಿ ಕೊಲೆ ಮಾಡಿ ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದಲ್ಲಿ ಸುತ್ತಾಡಿದರೂ ಗೊತ್ತಾಗಿಲ್ಲಾ ಪೋಲೀಸರಿಗೆ.ಅಲ್ಲಿಂದ ಶಿವಮೊಗ್ಗಕ್ಕೆ ತೆರಳಿದನಾ ಹಂತಕ.
ಹುಬ್ಬಳ್ಳಿ:- ಹೌದು ಅಂದು ಬೆಳಗಿನ ಜಾವಾ 5-30 ಕ್ಕೆ ಅಟೋದಲ್ಲಿ ಅಂಜಲಿ ಮನೆಗೆ ತೆರಳಿ ಐದೇ ಐದು ನಿಮಿಷದಲ್ಲಿ ಕೊಲೆ ಮಾಡಿ ಮರಳಿ ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದಲ್ಲಿ ತಿರುಗಾಡಿದ ಸಿಸಿಟಿವಿ ದೃಶ್ಯಾವಳಿಗಳು ಉದಯ ವಾರ್ತೆ ಗೆ ಲಬ್ಯವಾಗಿವೆ.
ಕೊಲೆ ಮಾಡಿದ ನಂತರ ಬಸ್ ಮೂಲಕ ಎಲ್ಲಿಗಾದರೂ ಎಸ್ಕೇಪ್ ಆಗಬೇಕೆಂದು ಬಸ್ ನಿಲ್ದಾಣದಲ್ಲಿ ತಿರುಗಾಡಿ ಶಿವಮೊಗ್ಗ ಬಸ್ ಗೆ ಹತ್ತಿ ಪರಾರಿಯಾದನಾ ಹಂತಕ ಅಂತಾ ಪೋಲೀಸರು ಹುಡುಕಾಟ ನಡೆಸಿದ್ದಾರೆ.
ಅಂಜಲಿ ಕೊಲೆ ಮಾಡಿದ ಹಂತಕ ಒಂದು ಘಂಟೆಯ ನಂತರವೂ ಬಸ್ ನಿಲ್ದಾಣದಲ್ಲಿಯೇ ತಿರುಗಾಡಿದರೂ ಹುಬ್ಬಳ್ಳಿ ಪೋಲೀಸರಿಗೆ ಗೊತ್ತಾಗದಿರುವುದು ವಿಪರ್ಯಾಸವೇ ಸರಿ.