ವಿವಾಹಿತ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಭೂಪ: ಅಶ್ಲೀಲ ವಿಡಿಯೋ ಇಟ್ಟುಕೊಂಡು ನಿರಂತರ ಬ್ಲಾಕ್ ಮೇಲ್

Share to all

ವಿವಾಹಿತ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಭೂಪ: ಅಶ್ಲೀಲ ವಿಡಿಯೋ ಇಟ್ಟುಕೊಂಡು ನಿರಂತರ ಬ್ಲಾಕ್ ಮೇಲ್

ಹುಬ್ಬಳ್ಳಿಯ ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಹತ್ಯೆ ನಂತರ ಪುಂಡು ಪೊಕರಿಗಳಿಗೆ ಲಂಗು ಲಗಾಮು ಇಲ್ಲದಂತಾಗಿದೆ. ದಿನೇ ದಿನೇ ಮಹಿಳೆಯರ ಮೇಲೆ ಹಲ್ಲೆ ಪ್ರಕರಣಗಳು ಹಾಗೂ ದೌರ್ಜನ್ಯ ಹೆಚ್ಚಾಗುತ್ತಿದ್ದು ಪೊಲೀಸರು ಎಚ್ಚೆತ್ತುಕೊಂಡು ಕಠಿಣ ಕಾನೂನು ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ.

ತಡಸ ಗ್ರಾಮದ ವಿವಾಹಿತ ಮಹಿಳೆಯ ಖಾಸಗಿ ವಿಡಿಯೋ ಇಟ್ಟುಕೊಂಡು ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದ ಆರೋಪಿ ಕಳೆದ ದಿನ ಮನೆಗೆ ಹೋಗಿ ಮತ್ತೆ ತನ್ನ ಪುಂಡಾಟ ಮೆರೆದಿದ್ದಾನೆ.ತನ್ನೊಂದಿಗೆ ಸಹಕರಿಸಬೇಕು ಇಲ್ಲವಾದರೆ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಕೂಡ ಹಾಕಿದ್ದಾನೆ.

ಸ್ಥಳೀಯರ ಸಹಾಯದಿಂದ ಮಹಿಳೆ ರಕ್ಷಣೆಗೆ ಒಳಗಾಗಿ ತಡಸ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಆದ್ರೆ ಪೊಲೀಸರು ಅಲ್ಲಿಯೂ ಬೇಗ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು ಎಂದು ತಿಳಿದುಬಂದಿದೆ.ಇನ್ನು ನಂತರ ದೂರು ದಾಖಲಿಸಿಕೊಂಡರಿವ ಪೊಲೀಸರು ಅತ್ಯಾಚಾರ ಹಾಗು ಮಾಹಿತಿ ತಂತ್ರಜ್ಞಾನ ಕೇಸ್ ದಾಖಲಿಸದೆ ನಿರ್ಲಕ್ಷ್ಯ ಕೂಡ ವಹಿಸಿದ್ದಾರೆ ಎಂದು ತಿಳಿದುಬಂದಿದೆ

ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ಮಹಿಳೆ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡುವರಾ ಎನ್ನುವುದನ್ನ ಕಾದು ನೋಡಬೇಕು

ಉದಯ ವಾರ್ತೆ

ಶಿಗ್ಗಾಂವ


Share to all

You May Also Like

More From Author