ದಿಂಗಾಲೇಶ್ವರ ಸ್ವಾಮಿಗಳದ್ದು ಎನ್ನಲಾದ ಸ್ಪೋಟಕ ಆಡಿಯೋ ಒಂದು ಹೊರಬಿದ್ದಿದೆ.ಅದೊಂದು ಮಾಡಿ ಮುಂದೆ ನೋಡಿ ಎಂದ ದಿಂಗಾಲೇಶ್ವರ ಆಡಿಯೋ.
ಹುಬ್ಬಳ್ಳಿ:-ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಅಬ್ಯೆರ್ಥಿ ವಿರುದ್ದ ಧರ್ಮ ಯುದ್ದ ಸಾರಿದ್ದ ದಿಂಗಾಲೇಶ್ವರ ಸ್ವಾಮೀಜಿಯದು ಎನ್ನಲಾದ ಸ್ಪೋಟಕ ಆಡಿಯೋ ಒಂದು ಹೊರಬಿದ್ದಿದೆ.
ಬಾಗಲಕೋಟೆಯ ಕಾಂಗ್ರೆಸ್ ಮುಖಂಡ ಎಸ್ ಆರ್ ಪಾಟೀಲ ಅವರಿಗೆ ವಿಧಾನ ಪರಿಷತ್ ಟಿಕೆಟ್ ಕೊಡಿಸಲು ಮಾತನಾಡಿದ ಆಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ದಿಂಗಾಲೇಶ್ವರ ಏನು ಮಾತನಾಡಿದ್ದಾರೆ ಕೇಳಿ..
ನೀವು ಇದೊಂದು ಮಾಡಿಕೊಡಿ ನೀವು ಮುಂದೆ ಸಿಎಂ ಆಗುವ ತನಕ ನಾವು ಏನೇನ ಮಾಡ್ತೇವಿ ನೋಡಿ ಎಂದಿರುವ ದಿಂಗಾಲೇಶ್ವರ ಸ್ವಾಮೀಜಿ ಈಗ ಪಕ್ಕಾ ರಾಜಕೀಯಕ್ಕೆ ಎಂಟ್ರಿ ಕೊಟ್ಟರಾ ಅನ್ನೋ ಪ್ರಶ್ನೆ ಹುಟ್ಟುಹಾಕಿದೆ.