ಮೋದಿ ಸಂಪುಟದಲ್ಲಿ ಪ್ರಹ್ಲಾದ ಜೋಶಿ,ಎಚ್.ಡಿ.ಕುಮಾರಸ್ವಾಮಿ,ಶೋಭಾ ಕರಂದ್ಲಾಜೆ ಹಾಗೂ ಸೋಮಣ್ಣಗೆ ಸಚಿವ ಸ್ಥಾನ ಪಿಕ್ಸ್.ಸಂಜೆ ಪ್ರಮಾಣ ವಚನ ಸ್ವೀಕಾರ.
ದೆಹಲಿ:-ಪ್ರಧಾನಿ ಮೋದಿ ಅವರ ಕ್ಯಾಬಿನೆಟ್ ನಲ್ಲಿ ರಾಜ್ಯದ ನಾಲ್ಕು ಸಂಸದರಿಗೆ ಮಂತ್ರಿಗಿರಿ ಪಿಕ್ಸ್ ಆಗಿದ್ದು ಸಂಜೆ ನಡೆಯುವ ಪ್ರಮಾಣ ವಚನ ಸಮಾರಂಭದಲ್ಲಿ ನಾಲ್ವರು ಪ್ರಮಾಣ ವಚನ ಸ್ವೀಕರಿಸಿಲಿದ್ದಾರೆ.
ಮಂತ್ರಿ ಪಟ್ಟ ಸ್ವೀಕರಿಸುವವರಿಗೆ ಈಗಾಗಲೇ ಮೋದಿ ಆವ್ವಾನ ನೀಡಿದ್ದಾರೆ.ಅಲ್ಲದೇ ಮಂತ್ರಿ ಆಗೋವವರ ಜೊತೆ ಪ್ರಧಾನಿ ಮೋದಿಯವರು ಸಭೆ ನಡೆಸಿದ್ದಾರೆ.
ಮೋದಿ ಮೂರನೇ ಬಾರಿಗೆ ಪ್ರಧಾನಿ ಆದರೆ ಧಾರವಾಡ ಸಂಸದ ಪ್ರಹ್ಲಾದ ಜೋಶಿ ಎರಡನೇ ಬಾರಿಗೆ ಸಚಿವರಾಗಿ ಇಂದು ಸಾಯಂಕಾಲ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ಇವರ ಜೊತೆಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ,ಶೋಭಾ ಕರಂದ್ಲಾಜೆ ಹಾಗೂ ಸೋಮಣ್ಣ ಕೂಡಾ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.