ಎಸ್ಪಿ ಕಚೇರಿಯಲ್ಲಿಯೇ ಪತ್ನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಪೋಲೀಸ.ಕೊಲೆ ಮಾಡುವ ಹಂತಕ್ಕೆ ಹೋಗಿತ್ತಾ ಪತಿ ಪತ್ನಿ ಜಗಳ.
ಹಾಸನ:-ಪೋಲೀಸ ಪೇದೆಯೊಬ್ಬ ತನ್ನ ಪತ್ನಿಯನ್ನು ಜಿಲ್ಲಾ ಪೋಲೀಸ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ.
ಶಾಂತಿಗ್ರಾಮ ಸರ್ಕಲ್ ಇನ್ಸ್ಪೆಕ್ಟರ್ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಪೋಲೀಸ ಲೋಕನಾಥ್ ಎಂಬುವ ತನ್ನ ಪತ್ನಿ ಮಮತಾಗೆ ಚಾಕುವಿನಿಂದ ಬರ್ಭರವಾಗಿ ಇರಿದಿದ್ದಾನೆ.ತೀವ್ರ ರಕ್ತ ಸ್ರಾವದಿಂದ ಮಮತಾ ಸಾವನ್ನಪ್ಪಿದ್ದಾಳೆ.
ಹಾಸನದ ಎಸ್ ಪಿ ಕಛೇರಿಗೆ ಪೋಲೀಸ ಲೋಕನಾಥ ಮತ್ತು ಪತ್ನಿ ಮಮತಾ ಇಬ್ಬರ ನಡುವೆ ಜಗಳ ನಡೆದು ಅದು ಕೊಲೆ ಮಾಡುವ ಹಂತಕ್ಕೆ ಹೋಗಿದೆ ಎನ್ನಲಾಗಿದೆ.ದೂರು ದಾಖಲಿಸಿಕೊಂಡಿರುವ ಪೋಲೀಸರು ಪೇದೆಯನ್ನು ವಶಕ್ಕೆ ಪಡೆದಿದ್ದಾರೆ.