ನಿಷೇಧಿತ ಪ್ಲಾಸ್ಟಿಕ್ ಬುಡಕ್ಕೆ ಕೈ ಹಾಕಿದ ಕಮೀಷನರ್.ನಿಷೇಧಿತ ಪ್ಲಾಸ್ಟಿಕ್ ಉತ್ಪಾದನಾ ಘಟಕ ಸೀಜ್.FIR ದಾಖಲು..!
ಹುಬ್ಬಳ್ಳಿ:-ಹುಬ್ಬಳ್ಳಿಯ ಇಂಡಸ್ಟ್ರಿಯಲ್ ಎಸ್ಟೇಟ್ ನಲ್ಲಿರುವ ಭಾರೀ ಪ್ರಮಾಣದ ನಿಷೇಧಿತ ಪ್ಲಾಸ್ಟಿಕ್ ಉತ್ಪಾದನ ಘಟಕದ ಮೇಲೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ:- ಈಶ್ವರ ಉಳ್ಳಾಗಡ್ಡಿ ದಾಳಿ ಮಾಡಿ ಸಾವಿರಾರು ಟನ್ ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ ಪಡೆದು ಕಂಪನಿಯ ವಿರುದ್ದ ದೂರು ದಾಖಲು ಮಾಡಿದ್ದಾರೆನ್ನಲಾಗಿದೆ.
ಕಳೆದ ಹಲವು ದಿನಗಳಿಂದ ನಿಷೇಧಿತ ಪ್ಲಾಸ್ಟಿಕ್ ಬಂದ್ ಮಾಡಲು ಕಮೀಷನರ್ ಹೇಳಿದ್ದರು.ಈಗ ಸ್ವತ: ಆಯುಕ್ತರೇ ನಿಷೇಧಿತ ಪ್ಲಾಸ್ಟಿಕ್ ಬೆನ್ನು ಬಿದ್ದಿದ್ದು ಇಂದು ದೊಡ್ಡ ಪ್ರಮಾಣದ ಪ್ಲಾಸ್ಟಿಕ್ ಉತ್ಪಾದನಾ ಘಟಕದ ಮೇಲೆ ದಾಳಿ ಮಾಡಿ ಸಾವಿರಾರು ಟನ್ ನಿಷೇಧಿತ ಪ್ಲಾಸ್ಟಿಕ್ ಸೀಜ್ ಮಾಡಿದ್ದಾರೆ.