ಒಂದು ಕಡೆ ಸೊಳ್ಳೆ ಉತ್ಪತ್ತಿ ತಾಣಗಳ ನಾಶಪಡಿಸುವ ಅಭಿಯಾನ.ಇನ್ನೊಂದು ಕಡೆ ಪಾಲಿಕೆಯ ಅಧಿಕಾರಿಗಳ ವಿರುದ್ದ ಜನರ ಆಕ್ರೋಶ.

Share to all

ಒಂದು ಕಡೆ ಸೊಳ್ಳೆ ಉತ್ಪತ್ತಿ ತಾಣಗಳ ನಾಶಪಡಿಸುವ ಅಭಿಯಾನ.ಇನ್ನೊಂದು ಕಡೆ ಪಾಲಿಕೆಯ ಅಧಿಕಾರಿಗಳ ವಿರುದ್ದ ಜನರ ಆಕ್ರೋಶ.

ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಅಧಿಕಾರಿಗಳು ಹಾಗೂ ಪಾಲಿಕೆಯ ಸದಸ್ಯರು ಈಡಿಸ್ ಸೊಳ್ಳೆ ಉತ್ಪತ್ತಿ ನಾಶಪಡಿಸುವ ಜಾಗೃತಿ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ.ಆದರೆ ಜನರು ಅಭಿಯಾನಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜನರ ಆಕ್ರೋಶಕ್ಕೆ ಕಾರಣ. ಮನೆಯ ಮುಂದೆ ಜನರು ತುಂಬಿಟ್ಟ ನೀರನ್ನು ಪಾಲಿಕೆಯ ಅಧಿಕಾರಿಗಳು ನಾಶಪಡಿಸುತ್ತಿರುವ ಬಗ್ಗೆ….ನಮಗೆ ನೀರು ಬರುವುದೇ ವಾರಕ್ಕೊಮ್ಮೆ ಅದಕ್ಕೆ ನೀರು ತುಂಬಿಟ್ಟುಕೊಳ್ಳುತ್ತೇವೆ.ಅವುಗಳನ್ನು ಬೀದಿಗೆ ಹಾಕಿ ಹೋದರೆ ನಾವೇನು ಮಾಡಬೇಕು ಒಂದು‌ದಿನ ಬಿಟ್ಟು ಒಂದು ದಿನ ನೀರು ಬಿಡಿ ನಾವು ನೀರು ಸ್ಟಾಕ್ ಮಾಡಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪಾಲಿಕೆಯ ಸದಸ್ಯ ಆರೀಪ್ ಬದ್ರಾಪುರ ಮಾತನಾಡಿ.ಜನರ ಆಕ್ರೋಶ ನಮಗೂ ಅರ್ಥ ಆಗುತ್ತೇ ಆದರೆ ನಮಗೆ ನೀರು ಸರಬರಾಜು ಮಾಡುವ ಎಲ್ ಆ್ಯಂಡ್ ಟೀ ಕಂಪನಿ ಸರಿಯಾಗಿ ಕೆಲಸ ಮಾಡುತ್ತಿಲ್ಲಾ.ಹೀಗಾಗಿ ಹತ್ತು ದಿನಕ್ಕೊಮ್ಮೆ ನೀರು ಸರಬರಾಜು ಮಾಡುತ್ತಿದ್ದಾರೆ.ಶೀಘ್ರದಲ್ಲಿ ಎಲ್ ಆ್ಯಂಡ ಟಿ ಕಂಪನಿ ವಿರುದ್ಧ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author