ಸಮುದಾಯ ಸಂಘಟಕರ ಎರಡನೇ ವಿಕೆಟ್ ಪತನ…ತಾವಾಗಿಯೇ ಮಹಾನಗರ ಪಾಲಿಕೆ ಬಿಡುತ್ತಿರುವ ಗ್ರೀನ್ ಇಂಕ್ ಅಧಿಕಾರಿಗಳು.ಇದು ಉದಯ ವಾರ್ತೆ ಇಂಪ್ಯಾಕ್ಟ್.

Share to all

ಸಮುದಾಯ ಸಂಘಟಕರ ಎರಡನೇ ವಿಕೆಟ್ ಪತನ…ತಾವಾಗಿಯೇ ಮಹಾನಗರ ಪಾಲಿಕೆ ಬಿಡುತ್ತಿರುವ ಗ್ರೀನ್ ಇಂಕ್ ಅಧಿಕಾರಿಗಳು.ಇದು ಉದಯ ವಾರ್ತೆ ಇಂಪ್ಯಾಕ್ಟ್.

ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸಮುದಾಯ ಸಂಘಟಕರ ದರ್ಭಾರ ಅಂತಾ ಉದಯ ವಾರ್ತೆ ಸರಣಿ ಸುದ್ದಿ ಪ್ರಸಾರ ಮಾಡಿತ್ತು.ಆ ಹಿನ್ನೆಲೆಯಲ್ಲಿ ಸಮುದಾಯ ಸಂಘಟನಾಧಿಕಾರಿಗಳಾಗಿದ್ದ ರಮೇಶ ನೂಲ್ವಿ ಈಗ ಪಾಲಿಕೆಯಿಂದ ಎತ್ತಂಗಡಿ ಆಗಿದ್ದಾರೆ.

 

ರಮೇಶ ನೂಲ್ವಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸಮುದಾಯ ಸಂಘಟಕರಾಗಿದ್ದರೂ ಕೂಡಾ ರಾಜಕೀಯ ಪ್ರಭಾವ ಬಳಸಿ ವಲಯ ಕಛೇರಿ 4 ರಲ್ಲಿ ಪ್ರಭಾರ ಜೋನಲ್ ಕಮೀಷನರ್ ಅಂತಾ ಕೆಲಸ ಮಾಡಿದ್ದರು. ಈಗ ಅವರನ್ನು ಮಹಾನಗರ ಪಾಲಿಕೆಯಿಂದ ಎತ್ತಂಗಡಿ ಮಾಡಿ ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣ ಪಂಚಾಯತಿಗೆ ಖಾಲಿ ಇರುವ ಸಮುದಾಯ ಸಂಘಟನಾಧಿಕಾರಿ ಅಂತಾ ಸರಕಾರ ಆದೇಶ ಮಾಡಿದೆ.

ಪಟ್ಟಣ ಪಂಚಾಯತಿಯಲ್ಲಿ ಇವರು ಸಮುದಾಯ ಸಂಘಟನಾಧಿಕಾರಿ ಆಗತಾರಾ ಅಥವಾ ಅಲ್ಲಿ ರಾಜಕೀಯ ಪ್ರಭಾವ ಬಳಸಿ ಅಲ್ಲಿ ಚೀಪ್ ಆಪೀಸರ್ ಆಗತಾರಾ ಕಾದು ನೋಡ ಬೇಕಾಗಿದೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author