ಬಹು ದೊಡ್ಡ ಸೈಬರ್ ವಂಚಕರು ಹುಬ್ಬಳ್ಳಿ ಪೋಲೀಸರ ಬಲೆಗೆ..ಕರ್ನಾಟಕ, ಆಂದ್ರ, ಮಹಾರಾಷ್ಟ್ರ ಸೇರಿ ದೇಶದ ನಾನಾ ಭಾಗಗಳಲ್ಲಿ ವಂಚನೆ.
ಹುಬ್ಬಳ್ಳಿ;- ಕರ್ನಾಟಕ ಸೇರಿದಂತೆ ದೇಶದ ವಿವಿಧ ಕಡೆ ಸೈಬರ್ ವಂಚನೆಯ ಮೂಲಕ ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಮೂವರು ಸೈಬರ್ ವಂಚಕರನ್ನು ಹುಬ್ಬಳ್ಳಿ ಪೋಲೀಸರು ಹೆಡಮುರಿ ಕಟ್ಟಿದ್ದಾರೆ.
ದೆಹಲಿ ಮೂಲದ ನಿಖಿಲ್ ಕುಮಾರ.ಸಚಿನ್ ಬೋಲಾ.ಹಾಗೂ ಮುಂಬೈ ಮೂಲದ ಮೂವರನ್ನು ಆರೆಸ್ಟ್ ಮಾಡಿದ್ದಾರೆ.ಈ ಮೂವರು ದೇಶದ 270 ವಿವಿಧ ಬ್ಯಾಂಕುಗಳಲ್ಲಿ ನಕಲಿ ಖಾತೆ ಸೃಷ್ಟಿಸಿ ಅವ್ಯವಹಾರ ಮಾಡುತ್ತಿದ್ದರು ಎನ್ನಲಾಗಿದೆ.
ಈ ಮೂವರಲ್ಲಿ ಇಬ್ಬರು ಸಾಪ್ಟವೇ ಇಂಜನೀಯರ ಆಗಿರುವ ಹಿನ್ನೆಲೆಯಲ್ಲಿ ಕೋಡಿಂಗ್,ಡಿಕೋಡಿಂಗ್ ನಲ್ಲಿ ಎಕ್ಷಪಟ್೯ ಆಗಿದ್ದರು.ಕೆಲ ದಿನಗಳ ಹಿಂದೆಯಷ್ಟೇ ಹುಬ್ಬಳ್ಳಿ ಸೈಬರ್ ಪೋಲೀಸ ಠಾಣೆಯಲ್ಲಿ ವಂಚನೆ ದೂರು ದಾಖಲಾಗಿತ್ತು.
ಆ ದೂರಿನ ಆಧಾರದ ಮೇಲೆ ಹುಬ್ಬಳ್ಳಿ ಪೋಲೀಸರು ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.