8 ದಿನಗಳ ಬಳಿಕ ಶಿರೂರು ಗುಡ್ಡಕುಸಿತದಲ್ಲಿ ಸಿಲುಕಿದ್ದ ಮಹಿಳೆ ಶವ ಪತ್ತೆ..!

Share to all

ಕಾರವಾರ: ಶಿರೂರು ಗುಡ್ಡಕುಸಿತ ಘಟನೆಯಲ್ಲಿ ನಾಪತ್ತೆಯಾಗಿದ್ದ 57 ವರ್ಷದ ಮಹಿಳೆಯ ಮೃತದೇಹ 8 ದಿನದ ಬಳಿಕ ಪತ್ತೆಯಾಗಿದೆ. ಮೃತ ಮಹಿಳೆಯನ್ನು ಸಣ್ಣಿ ಹನುಮಂತ ಗೌಡ ಎಂದು ಗುರುತಿಸಲಾಗಿದೆ. ಗಂಗಾವಳಿ ನದಿಯ ಗಂಗೆಕೊಳ್ಳ ಸಮೀಪ ಶವ ಪತ್ತೆಯಾಗಿದ್ದು, ಶಿರೂರು ಗುಡ್ಡ ಕುಸಿತದಿಂದಾಗಿ ಉಳುವರೆ ಗ್ರಾಮದಲ್ಲಿ ಮನೆ ಕುಸಿತವಾಗಿ ಮಹಿಳೆ ಮೃತಪಟ್ಟಿದ್ದರು.

ಹೌದು ಉತ್ತರ ಕನ್ನಡದ ಶಿರೂರರಲ್ಲಿ ಗುಡ್ಡ ಕುಸಿತಗೊಂಡು ಇಂದಿಗೆ 8 ದಿನಗಳಾಗಿವೆ ಮಣ್ಣಿನ ಕುಸಿತದಿಂದ ನದಿಯಲ್ಲಿ ತೇಲಿಹೋದ ಗಂಗೆಕೊಳ್ಳದ ಲೋಕೇಶ್ ನಾಯ್ಕ, ಶಿರೂರಿನ ಜಗನ್ನಾಥ ಜಟ್ಟಿ, ಉಳವರೆ ಗ್ರಾಮದ ಸಣ್ಣಿ ಹನುಮಂತಗೌಡ, ಕೇರಳ ಮೂಲದ ಅರ್ಜುನ್ ಶವ ಪತ್ತೆಯಾಗಬೇಕಿದೆ. ಶಂಕಿತ ಸ್ಥಳದಲ್ಲಿ ಶೋಧ ಕಾರ್ಯ ಮಾಡಿದರೂ ಟ್ರಕ್, ಟ್ಯಾಂಕರ್‌ಗಳು ಮಾತ್ರ ಪತ್ತೆಯಾಗಿಲ್ಲ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಆರ್ಮಿ ಕಮಾಂಡೋಗಳ ತಂಡದಿಂದ ಶೋಧ ಕಾರ್ಯ ಮುಂದುವರೆದಿದೆ.

 

 


Share to all

You May Also Like

More From Author