ASI ಹುದ್ದೆಯಿಂದ PSI ಗೆ ಮುಂಬಡ್ತಿ ನೀಡಿದ ಪೊಲೀಸ್ ಆಯುಕ್ತರು – ಹುಬ್ಬಳ್ಳಿ ಧಾರವಾಡದಲ್ಲಿ ಐದು ಪೊಲೀಸ್ ಅಧಿಕಾರಿಗಳಿಗೆ ಭಡ್ತಿ ಭಾಗ್ಯ.
ಹುಬ್ಬಳ್ಳಿ ಧಾರವಾಡ –
ಹುಬ್ಬಳ್ಳಿ ಧಾರವಾಡ ವಿವಿಧ ಪೊಲೀಸ್ ಠಾಣೆಗಳಲ್ಲಿ ಸಿವಿಲ್ ವಿಭಾಗದಲ್ಲಿ ಎಎಸ್ ಐ ಗಳಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಐದು ಜನ ಅಧಿಕಾರಿಗಳಿಗೆ ಪೊಲೀಸ್ ಆಯುಕ್ತ ಶಶಿಕುಮಾರ್ ಮುಂಬಡ್ತಿಯನ್ನು ನೀಡಿದ್ದಾರೆ.ಹೌದು ರಾಜ್ಯ ಸರ್ಕಾರದ ಮತ್ತು ಪೊಲೀಸ್ ಇಲಾಖೆಯ ಮಾರ್ಗಸೂಚಿಯಂತೆ ಪೊಲೀಸ್ ಅಧಿಕಾರಿಗಳು ಐದು ಜನ ಎಎಸ್ ಐ ಗಳಿಗೆ ಹುದ್ದೆಯಿಂದ ಪಿಎಸ್ಐ ಹುದ್ದೆಗೆ ಮುಂಬಡ್ತಿ ಬಡ್ತಿಯನ್ನು ನೀಡಿದ್ದಾರೆ.ಐ ಎಮ್ ಪಠಾಣ,ಎಸ್ ಎಮ್ ನಾಯಕ,ಎ ಕೆ ಚಲವಾದಿ,ಶ್ರೀಮತಿ ಜೆ ಎಸ್ ಚಲವಾದಿ,ಮತ್ತು ಎನ್ ಎಂ ಮನಿಯಾರ್ ಅವರಿಗೆ ಎಎಸ್ಐ ಹುದ್ದೆಯಿಂದ ಪಿಎಸ್ಐ ಹುದ್ದೆಗೆ ಮುಂಬಡ್ತಿಯನ್ನು ನೀಡಿ ಆದೇಶವನ್ನು ಮಾಡಿದ್ದಾರೆ.