ನ್ಯಾಯಕ್ಕಾಗಿ ಬೀದಿಗೆ ಬಂದ ದಲಿತ ಕುಟುಂಬ.. ಮಗನ ಕೊಲೆಗೆ ಯತ್ನಿಸಿದವನ ಮೇಲೆ ಕ್ರಮಕೈಕೊಳ್ಳದ ಪೋಲೀಸರ ವಿರುದ್ದ ಆಕ್ರೋಶ.ಪೋಲೀಸ ಠಾಣೆ ಎದುರು ತಡ ರಾತ್ರಿವರೆಗೂ ಕುಟುಂಬ ಸಮೇತ ಧರಣಿ.

Share to all

ನ್ಯಾಯಕ್ಕಾಗಿ ಬೀದಿಗೆ ಬಂದ ದಲಿತ ಕುಟುಂಬ.. ಮಗನ ಕೊಲೆಗೆ ಯತ್ನಿಸಿದವನ ಮೇಲೆ ಕ್ರಮಕೈಕೊಳ್ಳದ ಪೋಲೀಸರ ವಿರುದ್ದ ಆಕ್ರೋಶ.ಪೋಲೀಸ ಠಾಣೆ ಎದುರು ತಡ ರಾತ್ರಿವರೆಗೂ ಕುಟುಂಬ ಸಮೇತ ಧರಣಿ.

ಹುಬ್ಬಳ್ಳಿ:-ಮಗನ ಕೊಲೆಗೆ ಯತ್ನಿಸಿದವರ ವಿರುದ್ಧ ದೂರು ನೀಡಿದರೂ ಕ್ರಮಕೈಕೊಳ್ಳದ ಹಳೇಹುಬ್ಬಳ್ಳಿ ಪೋಲೀಸರ ವಿರುದ್ಧ ದಲಿತ ಮುಖಂಡ ಮಾರುತಿ ದೊಡ್ಮನಿ ಹಳೇಹುಬ್ಬಳ್ಳಿ ಪೋಲೀಸ ಠಾಣೆ ಎದುರು ತಡ ರಾತ್ರಿವರೆಗೂ ಕುಟುಂಬ ಸಮೇತ ಧರಣಿ ನಡೆಸಿದ ಘಟನೆ ನಡೆದಿದೆ.

ನನ್ನ ಮಗ ಅನೂಪಗೆ ಚಾಕು ತೋರಿಸಿ ಕೊಲೆಗೆ ಯತ್ನ ಮಾಡಲಾಗಿತ್ತು.ಕೊಲೆಗೆ ಯತ್ನ ಮಾಡಿದವನ ವಿರುದ್ಧ ನ್ಯಾಯಾಲಯದ ಅನುಮತಿ ಮೇರೆಗೆ ದೂರು ದಾಖಲು ಮಾಡಲಾಗಿತ್ತು.ಆದರೆ ಹಳೇಹುಬ್ಬಳ್ಳಿ ಪೋಲೀಸರು ಕೊಲೆಗೆ ಯತ್ನಿಸಿದವನನ್ನು ಠಾಣೆಗೆ ಕರೆಯಿಸಿ ಅವನ ಮೇಲೆ ಕ್ರಮಕೈಕೊಳ್ಳದೇ ಬಿಟ್ಟು ಕಳಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಸಮಯದಲ್ಲಿ ಹಳೇಹುಬ್ಬಳ್ಳಿ ಇನ್ಸ್ಪೆಕ್ಟರ್ ಸುರೇಶ.ಯಳ್ಳೂರ ಹಾಗೂ ದಲಿತ ಮುಖಂಡ ಮಾರುತಿ ದೊಡ್ಮನಿ ನಡುವೆ ಮಾತಿನ ಚಕಮಿಕಿ ನಡೆದು ನನಗೆ ಗುಂಡು ಹಾಕ್ತೀರಾ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author