ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮೀಗೆ ನೋಂದಣಿ ಮಾಡಿಸಿದ್ದ ಲಕ್ಷಾಂತರ ಮಹಿಳೆಯರಿಗೆ ಎರಡು ತಿಂಗಳಾದರೂ ಖಾತೆಗೆ ಹಣ ಜಮೆಯಾಗಿಲ್ಲ. ಕಳೆದ 2 ತಿಂಗಳು ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ.ಇದೀಗ ತಾಂತ್ರಿಕ ಸಮಸ್ಯೆ ಸರಿಪಡಿಸುವ ಕೆಲಸ ತ್ವರಿತವಾಗಿ ಮಾಡಲಾಗುತ್ತಿದ್ದು, ಅಂತಿಮ ಹಂತಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಗಸ್ಟ್ ಮೊದಲ ವಾರವೇ ಖಾತೆಗೆ ಹಣ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಹೌದು ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ ಹಾಗೂ ಈ ತಿಂಗಳ ಕಂತಿನ ಹಣಕ್ಕಾಗಿ ಕಾಯುತ್ತಿರುವ ಮನೆಯ ಯಜಮಾನಿಯರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಈ ಆಗಸ್ಟ್ ಮೊದಲ ವಾರವೇ ಜೂನ್, ಜುಲೈ ತಿಂಗಳ ಕಂತಿನ ಹಣ ಒಟ್ಟಿಗೆ ಜಮಾ ಮಾಡಲಿದೆ ಎಂದು ತಿಳಿಸಿದೆ.ಕಳೆದ 2 ತಿಂಗಳು ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ.
ಇದೀಗ ತಾಂತ್ರಿಕ ಸಮಸ್ಯೆ ಸರಿಪಡಿಸುವ ಕೆಲಸ ತ್ವರಿತವಾಗಿ ಮಾಡಲಾಗುತ್ತಿದ್ದು, ಅಂತಿಮ ಹಂತಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಗಸ್ಟ್ ಮೊದಲ ವಾರವೇ ಖಾತೆಗೆ ಹಣ ಮಾಡಲಾಗುತ್ತದೆ ಎಂದು ಹೇಳಲಾಗಿದೆ.ಇನ್ನೂ ಈ ಮಾಹಿತಿ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪ್ರತಿಕ್ರಿಯೆ ನೀಡಿದ್ದು, ಗೃಹಲಕ್ಷ್ಮಿ ಹಣ ಮೂರ್ನಾಲ್ಕು ತಿಂಗಳಿನಿಂದ ಬರುತ್ತಿಲ್ಲ ಎನ್ನುವುದು ತಪ್ಪು ಮಾಹಿತಿ, ಗೃಹಲಕ್ಷ್ಮಿ ಹಣವನ್ನು ಮೇ ತಿಂಗಳಲ್ಲಿ ಜಮಾ ಮಾಡಿದ್ದೇವೆ. ಜೂನ್, ಜುಲೈ ತಿಂಗಳ ಗೃಹಲಕ್ಷ್ಮಿ ಹಣ ಹಾಕಲು ತಾಂತ್ರಿಕ ದೋಷ ಕಾರಣವಾಗಿದ್ದು, ಈಗಾಗಲೇ ಡಿಬಿಟಿ ಪುಶ್ ಮಾಡುತ್ತಿದ್ದೇವೆ. 8-10 ದಿನದೊಳಗೆ ಗೃಹಲಕ್ಷ್ಮಿ ಹಣ ಖಾತೆಗೆ ಜಮಾ ಮಾಡಲಾಗುವುದು.
ಈ ಯೋಜನೆಯನ್ನು ಮಹಿಳೆಯ ಆರ್ಥಿಕ ಸಬಲೀಕರಣಕ್ಕಾಗಿ ನೀಡಲಾಗುತ್ತಿದೆ. ಚುನಾವಣೆ ನೆಡೆಯುವುದಕ್ಕಿಂತ ಮುಂಚೆ ರಾಜ್ಯದ ಮಹಿಳೆಯರಿಗೆ ಈ ಭರವಸೆ ನೀಡಲಾಗಿತ್ತು. ಹಾಗಾಗಿ ಯಾವುದೇ ಕಾರಣಕ್ಕೂ ಗೃಹ ಲಕ್ಷ್ಮಿ ಯೋಜನೆಯನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.