ಬೆಂಗಳೂರಲ್ಲಿ ನಿಮಗಿಲ್ಲ ರಕ್ಷಣೆ; ಕಾಮುಕನ ಅಟ್ಟಹಾಸ.! ತಬ್ಬಿಕೊಂಡು ಬಲವಂತ ಚುಂಬನ

Share to all

ಬೆಂಗಳೂರು:– ರಾಜಧಾನಿ ಬೆಂಗಳೂರಿನಲ್ಲಿ ಒಂಟಿಯಾಗಿ ಮಹಿಳೆಯರು ತಿರ್ಗಾಡೋದು ಕಷ್ಟ ಆಗ್ಬಿಟ್ಟಿದೆ. ಒಬ್ಬರೇ ವಾಕಿಂಗ್ ಹೋಗೋದು ಕಷ್ಟ, ಒಬ್ಬರೆ ಆಫೀಸ್ ಗೆ ಹೋಗೋದು ಕಷ್ಟ. ಒಟ್ನಲ್ಲಿ ಒಬ್ಬೊಬ್ಬರೇ ಎಲ್ಲೂ ಹೋಗೋದಕ್ಕೆ ಹಾಗೋದೆ ಇಲ್ಲ.

ಹೌದು, ಬೆಂಗಳೂರಿನಲ್ಲಿ ಹೆಣ್ಣುಮಕ್ಕಳಿಗೆ ಸುರಕ್ಷತೆಯೇ ಇಲ್ಲದಂತಾಗಿದೆ. ಮನೆ ಎದುರು ತಿರುಗಾಡುತ್ತಿರುವಾಗ ಚಿನ್ನದ ಸರ ಕಿತ್ತುಕೊಂಡು ಹೋಗುವುದು, ಅವರ ಮೇಲೆ ಹಲ್ಲೆ ನಡೆಸುವುದು, ಮೊಬೈಲ್‌, ಪರ್ಸ್‌ ಎಗರಿಸುವುದು ಸೇರಿ ಹಲವು ರೀತಿಯ ಪ್ರಕರಣಗಳು ಸುದ್ದಿಯಾಗುತ್ತಲೇ ಇರುತ್ತವೆ.

ಇದೀಗ ಅಂತದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಯು ಮನೆಯ ಬಳಿ ವಾಕಿಂಗ್‌ ಮಾಡುತ್ತಿದ್ದಾಗ ದುಷ್ಕರ್ಮಿಯೊಬ್ಬ ಬಳಿ ಬಂದಿದ್ದಾನೆ. ಅವರನ್ನು ಬಲವಂತವಾಗಿ ಹಿಡಿದು ತಬ್ಬಿಕೊಂಡು, ಕಿಸ್‌ ಕೊಟ್ಟಿದ್ದಾನೆ. ದುಷ್ಕರ್ಮಿಯಿಂದ ಬಿಡಿಸಿಕೊಂಡು ಕೂಗುತ್ತ ಮಹಿಳೆ ಓಡಿದ್ದಾರೆ. ಅವರ ಹಿಂದೆಯೇ ಓಡಿ ಬಂದ ದುರುಳನು, ಮತ್ತೆ ಕಿರುಕುಳ ನೀಡಿ ಓಡಿಹೋಗಿದ್ದಾನೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಹಾಗೆಯೇ, ನಗರದಲ್ಲಿ ಹೆಣ್ಣುಮಕ್ಕಳ ಸುರಕ್ಷತೆ ಕುರಿತು ಆತಂಕ ವ್ಯಕ್ತವಾಗುತ್ತಿದೆ. ಜನ ಆಕ್ರೋಶವನ್ನೂ ವ್ಯಕ್ತಪಡಿಸುತ್ತಿದ್ದಾರೆ.

ಶುಕ್ರವಾರ ಬೆಳಗಿನ ಜಾವ ಮಹಿಳೆಯು ಮನೆಯ ಬಳಿಯಲ್ಲೇ ವಾಕಿಂಗ್‌ ಮಾಡುವಾಗ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಮಹಿಳೆಯು ಉತ್ತರ ಭಾರತದವರಾಗಿದ್ದು, ಬೆಳಗ್ಗೆ ಕೆಲ ಹೆಣ್ಣುಮಕ್ಕಳು ಸೇರಿ ವಾಕಿಂಗ್‌ ಹೋಗುತ್ತಿದ್ದರು. ಪಕ್ಕದ ಮನೆಯವರು ಬರುವ ಕಾರಣ ಅವರು ರಸ್ತೆ ಬದಿ ಕಾಯುತ್ತಿದ್ದರು ಎಂದು ತಿಳಿದುಬಂದಿದೆ

ವಿಡಿಯೊ ವೈರಲ್‌ ಆದ ಬಳಿಕ ಹೆಣ್ಣುಮಕ್ಕಳು ಮನೆಯಿಂದ ಹೊರಬರಲು ಕೂಡ ಭಯಪಡುವಂತಾಗಿದೆ. ಹೆಣ್ಣುಮಕ್ಕಳ ಆಭರಣ, ಮೊಬೈಲ್‌ ಸೇರಿ ಬೆಲೆ ಬಾಳುವ ವಸ್ತುಗಳನ್ನು ಕಿತ್ತುಕೊಂಡು ಹೋಗುವುದು ಸೇರಿ ಹಲವು ಕೃತ್ಯ ಎಸಗುತ್ತಿರುವ ಇಂತಹ ದುಷ್ಕರ್ಮಿಗಳನ್ನು ಪೊಲೀಸರು ನಿಯಂತ್ರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


Share to all

You May Also Like

More From Author