ನಾಯಿ ಮೇಲೆ ಹರಿದ ದ್ವಿಚಕ್ರ ವಾಹನ: ಕಾರಿನ ಡ್ಯಾಶ್​​​​́ಬೋರ್ಡ್​ ನಲ್ಲಿ ದೃಶ್ಯ ಸೆರೆ!

Share to all

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ದಿಢೀರನೆ ಅಡ್ಡ ಬಂದ ಪರಿಣಾಮ ನಾಯಿಯ ಮೇಲೆ ದ್ವೀಚಕ್ರ ವಾಹನ ಹರಿದ ಘಟನೆ ಜರುಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ವೈರಲ್​ ಆಗುತ್ತಿದೆ. ಆಗಸ್ಟ್​​ 4 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೆಲ್ಮೇಟ್​ ಧರಿಸದೆ, ಬೈಕ್​​ನಲ್ಲಿ ಮೂವರು ಸಾಗುತ್ತಿದ್ದರು. ಈ ವೇಳೆ ನಾಯಿ ಓಡುತ್ತ ರಸ್ತೆ ಮೇಲೆ ದಿಢೀರನೆ ಬಂದಿದೆ. ಆಗ ಸವಾರ ವಾಹನವನ್ನು ಸ್ಲೋ ಮಾಡಿ ಮುಂದಿನ ಚಕ್ರ ನಾಯಿ ಮೇಲೆ ಹರಿಯದಂತೆ ತಪ್ಪಿಸಿದ್ದಾನೆ. ಆದರೆ,

ಹಿಂದಿನ ಚಕ್ರ ನಾಯಿ ಮೇಲೆ ಹರಿದಿದೆ. ಇದರಿಂದ ನಾಯಿ ಕಾಲಿಗೆ ಪೆಟ್ಟಾಗಿದೆ. ಬಳಿಕ ವಾಹನ ಸವಾರ ಬೈಕ್​ ನಿಲ್ಲಿಸಿ ನಾಯಿ ಬಳಿ ಬಂದು ಏನಾಗಿದೆ ಎಂದು ಗಮನಿಸಿದ್ದಾನೆ. ಸ್ಥಳೀಯರು ನಾಯಿ ಬಳಿ ಬಂದು ಅದನ್ನು ಸುರಕ್ಷಿತವಾಗಿ ರಸ್ತೆಬದಿಗೆ ಕರೆದೊಯ್ದರು. ಈ ವಿಡಿಯೋವನ್ನು ನಾನು ವಾಚಿಂಗ್​​ ಎಂಬ ಎಕ್ಸ್​ ಖಾತೆದಾರ ಟ್ವೀಟ್​​ ಮಾಡಿದ್ದು, ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ಎಂದು ಬೆಂಗಳೂರು ನಗರ ಪೊಲೀಸ್​​ ಟ್ಯಾಗ್​ ಮಾಡಿ ಪೋಸ್ಟ್​ ಮಾಡಿದ್ದಾರೆ.


Share to all

You May Also Like

More From Author