ಬೆಂಗಳೂರು: ಹಳೇ ಮೈಸೂರು ಭಾಗದ ಹಿಡಿತಕ್ಕಾಗಿ ಶುರುವಾದ ಡಿಕೆಶಿ ಹಾಗೂ ಹೆಚ್ಡಿಕೆ ನಡುವಿನ ಮಾತಿನ ಸಮರ ಇನ್ನು ಲಕ್ಷಣ ಕಾಣ್ತಿಲ್ಲ.ಇಬ್ಬರ ನಡುವಿನ ರಾಜಕೀಯ ಕೆಸರೆರಚಾಟದ ಜೊತೆಗೆ ಇದೀಗ ವೈಯುಕ್ತಿಕ ನಿಂದನೆಗಳೂ ನಡೆದಿವೆ.ಅದು ಎಲ್ಲಿಗೆ ಬಂದು ನಿಂತಿದೆ ಅಂದ್ರೆ ಅವರ ಕುಟುಂಬ ಸದಸ್ಯರನ್ನ ಬೀದಿಗೆ ತರುವ ಮಟ್ಟಕ್ಕೆ ಇಳಿದಿದೆ.ನಾನಾ ನೀನಾ ಎನ್ನುವಷ್ಟರ ಮಟ್ಟಿಗೆ ಇಬ್ಬರೂ ನಾಯಕರು ಹಾವು ಮುಂಗುಸಿಯಂತೆ ಕಚ್ಚಾಡ್ತಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಅಕ್ಷರಶಃ ಹೆಚ್ಡಿಕೆ ಬೆಂಕಿಯುಗಳಿದಿದ್ದಾರೆ.ಮುಡಾ ಪಾದಯಾತ್ರೆ ಸಮಾರೋಪದ ಸಮಾವೇಶದಲ್ಲಿ ಡಿಕೆಶಿಯನ್ನೇ ಗುರಿಯಾಗಿಸಿ ಮಾತನಾಡಿದ ಹೆಚ್ಡಿಕೆ ಸಿದ್ದರಾಮಯ್ಯ ಜೊತೆ ಈ ಬಂಡೆ ಇರಲಿದೆ ಎಂದು ಶಿವಕುಮಾರ್ ಹೇಳಿದ್ದಾನೆ.ಆ ಬಂಡೆ ನಂಬಿ ಹೋಗಿದ್ದಕ್ಕೆ ನನ್ನ ತಲೆ ಮೇಲೆ ಬಂಡೆ ಬಿತ್ತು.ನಮ್ಮಪ್ಪ ಇಂಜಿನಿಯರ್ ಆಗಿದ್ರು.ನಿಮ್ಮಪ್ಪಾ ಏನಾಗಿದ್ರೂ ಹೇಳಪ್ಪಾ ಎಂದು ಕಿಡಿಕಾರಿದ್ರು. ಅಲ್ದೇ ಮ್ಯಾನ್ಹೋಲ್ ಚೇಂಬರ್ ಕದ್ದು ಮಾರುತ್ತಿದ್ದವನು ನೀನು,ನನ್ನ ಕುಟುಂಬದ ಬಗ್ಗೆ ಮಾತಾಡ್ತೀಯಾ.ಎಸ್ ಎಂ ಕೃಷ್ಣ ಅಳಿಯ ಕಾಫಿ ಡೇ ಸಿದ್ಧಾರ್ಥ ಸಾವಿನ ಹಿಂದೆ ಕೌತ್ವಾಲ್ ಶಿಷ್ಯ ಇದ್ದಾನೆ ಎಂದು ಡಿಕೆಶಿ ವಿರುದ್ಧ ಹೆಚ್ಡಿಕೆ ಗಂಭೀರ ಆರೋಪ ಮಾಡಿದ್ದರು.ಅಲ್ದೇ ನನಗೆ ನೀನು ಸವಾಲು ಹಾಕಿ ತೊಡೆ ತಟ್ಟಿದ್ದೀಯಾ ಅದನ್ನ ಹೆದುರಿಸೋಕೆ ನಾನು ಸಿದ್ಧ ಎಂದು ಹೆಚ್ಡಿಕೆ ಕೂಡ ತೊಡೆ ತಟ್ಟಿದ್ದಾರೆ.
ಇನ್ನು ಹೆಚ್ಡಿಕೆ ಆರೋಪಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಏಕವಚನದಲ್ಲೇ ತಿರುಗೇಟು ಕೊಟ್ಟಿದ್ದಾರೆ.ನಾನು ಇಷ್ಟು ದಿನ ಸುಮ್ನೆ ಇದ್ದೆ.ಆದ್ರೆ, ಅವರ ಮಗ ಸೋತ ಎಂದು ನನ್ನ ವಿರುದ್ಧ ಮಾತಾಡುತ್ತಿದ್ದೇನೆ..ಅದೇನು ಬಿಚ್ಚುತ್ತೀಯೋ ಅದನ್ನ ಮೊದಲು ಬಿಚ್ಚು.ಕುಮಾರಸ್ವಾಮಿ ಬೆದರಿಕೆಗಳಿಗೆ ಹೆದರುವ ರಕ್ತ ನನ್ನದಲ್ಲ ಎಂದು ದಳಪತಿಗೆ ಡಿಕೆಶಿ ತಿರುಗೇಟು ಕೊಟ್ಟಿದ್ದಾರೆ. ಒಟ್ಟಾರೆ,ಒಕ್ಕಲಿಗ ಕೋಟೆಯಲ್ಲಿ ಗೌಡರ ಗದ್ದಲ ದಿನೇ ದಿನೇ ಹೆಚ್ಚಾಗುತ್ತಿದೆ.ಅದ್ರಲ್ಲೂ ಪರಸ್ಪರ ವೈಯಕ್ತಿಕ ಹೇಳಿಕೆಗಳು ಹೆಚ್ಡಿಕೆ-ಡಿಕೆಶಿ ನೀಡುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ವಿಕೋಪಕ್ಕೆ ಹೋಗುವ ಸಾಧ್ಯತೆ ಇದೆ.