ಹಿಂಗ ಹೋಗಿ ಹಂಗ ಬಂದ ಹುಬ್ಬಳ್ಳಿಯಾಂವ…ಗ್ರೀನ್ ಇಂಕ್ ಬಿಟ್ಟು ಬದುಕಂಗಿಲ್ಲಾ..ಸಿ ದರ್ಜೆಯ AC ಸಾಹೇಬ್ರು..ಡಿಸಿ‌ ಮೇಡಂ ಏನ್ರೀ ಇವರ ಹಕೀಕತ್ತ..

Share to all

ಹಿಂಗ ಹೋಗಿ ಹಂಗ ಬಂದ ಹುಬ್ಬಳ್ಳಿಯಾಂವ…ಗ್ರೀನ್ ಇಂಕ್ ಬಿಟ್ಟು ಬದುಕಂಗಿಲ್ಲಾ..ಸಿ ದರ್ಜೆಯ AC ಸಾಹೇಬ್ರು..ಡಿಸಿ‌ ಮೇಡಂ ಏನ್ರೀ ಇವರ ಹಕೀಕತ್ತ..

ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸಮುದಾಯ ಸಂಘಟನಾಧಿಕಾರಿಯಾಗಿದ್ದ ರಮೇಶ ನೂಲ್ವಿ.ತಮ್ಮ ಪ್ರಭಾವ ಬಳಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಜೋನಲ್ ಅಸಿಸ್ಟಂಟ್ ಕಮೀಷನರ್ ಆಗಿದ್ದರು.ಇವರ ದರ್ಜೆ ಸಿ ಆಗಿದ್ದರೂ ಸಹ ಇವರ ಮಾಡುವ ಕೆಲಸ ಮಾತ್ರ ಕೆಎಎಸ್ ದರ್ಜೆಯ ZAC ಅಂತಾ.ಹೀಗಿರುವಾಗ ಇವರನ್ನ ಕುಂದಗೋಳಕ್ಕೆ ಸಮುದಾಯ ಸಂಘಟನಾಧಿಕಾರಿ ಅಂತಾ ವರ್ಗಾವಣೆ ಮಾಡಿ ಸರಕಾರ ಆದೇಶ ಮಾಡಿತು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಯಾವಾಗ ಗೇಟ್ ಪಾಸ್ ಸಿಕ್ಕಿತೋ ಅಲ್ಲಿಂದ ಸುರುವಾಯಿತು ನೋಡಿ Assistant commissioner ರಮೇಶ ನೂಲ್ವಿ ಅವರ ಅಸಲಿ ಆಟ.ಅವರು ಕಾರ್ಯನಿರ್ವಹಿಸುತ್ತಿದ್ದ ಜೋನ್ 4 ಅಲ್ಲಿಗೆ ಜೋನಲ್ ಕಮೀಷನರ್ ಯಾರನ್ನೂ ಹಾಕದಂತೆ ಕಮೀಷನರ್ ಮೇಲೆ ಒತ್ತಡ ತಂದು.ಅಲ್ಲಿ ಟೆಂಪರರಿಯಾಗಿ ಶಂಕರಗೌಡ ಪಾಟೀಲ ಅವರನ್ನ ಇನ್ ಚಾಜ್೯ ಜೋನಲ್ ಕಮೀಷನರ್ ಅಂತಾ ಮಾಡಿಸಿದರು.

ನೆಕ್ಷ್ಟ್ ಆಟ ಸುರುವಾಗಿದ್ದು ಧಾರವಾಡ ಜಿಲ್ಲಾಧಿಕಾರಿ ಕಛೇರಿಯಲ್ಲಿ ಪಿಡಿ ಅವರನ್ನು ಹಿಡಿದುಕೊಂಡು ಡೆಪಿಟೇಷನ್ ಮೇಲೆ ಕುಂದಗೋಳದಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮತ್ತೆ ಸಮುದಾಯ ಸಂಘಟನಾಧಿಕಾರಿ ಅಂತಾ ಆದೇಶ ಮಾಡಿಸಿಕೊಂಡು ಬಂದಿದ್ದೇ ತಡ ಮತ್ತೆ ಹುಬ್ಬಳ್ಳಿ ಕಡೆ ಮುಖ ಮಾಡಿಯೇ ಬಿಟ್ಟರು.

ಈಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮೀಷನರ್ ಕೈ ಕಾಲು ಹಿಡಿದುಕೊಂಡು ಮತ್ತೆ ಅದೇ ಜೋನ್ 4 ಕ್ಕೆ ಅಕ್ರಮವಾಗಿ Assistant commissioner ಆಗಿ ಗ್ರೀನ್ ಇಂಕ್ ಹಿಡಿಯಲಿದ್ದಾರೆ ನಿನ್ನೆ ತಾನೇ ಪ್ರಶಸ್ತಿ ಪಡೆದ ರಮೇಶ ನೂಲ್ವಿ ಸಾಹೇಬ್ರು.

ಹುಬ್ಬಳ್ಳಿ ಮಹಾನಗರ ಪಾಲಿಕೆಯನ್ನ ಬಿಡಲೇ ಬಾರದು ಎಂದು ಹಠ ತೊಟ್ಟಿರುವ ಸಮುದಾಯ ಸಂಘಟನಾಧಿಕಾರಿ ರಮೇಶ ನೂಲ್ವಿ ಅವರು ಹುಬ್ಬಳ್ಳಿ ಪಾಲಿಕೆಗೆ ಬರಲು ಮಾಡಿದ ಡ್ರಾಮಾ ಸೀನ್ ಗಳನ್ನ ಉದಯ ವಾರ್ತೆ ಮತ್ತಷ್ಟು ಬಯಲಿಗೆಳೆಯಲಿದೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author