ಅಮರಶಿವನಿಗೆ ಅಗ್ನಿಪರೀಕ್ಷೆ ,ಯುವಕರ ಸಂಘಟನೆಗೆ ಒತ್ತು ಕೊಟ್ಟ ಯುವ ನಾಯಕ.ತಂದೆ ಸಿ ಎಸ್ ಶಿವಳ್ಳಿ ಹಾದಿಯಲ್ಲಿ ಮಗ ಅಮರಶಿವ.
ಹುಬ್ಬಳ್ಳಿ : ರಾಜ್ಯದಲ್ಲಿ ಜರುಗುತ್ತಿರುವ ಯುವ ಕಾಂಗ್ರೆಸ್ ಸದಸ್ಯತ್ವ ಚುನಾವಣೆಗೆ ಶಿವಳ್ಳಿ ಕುಟುಂಬದ ಎರಡನೇ ತಲೆಮಾರಿನ ಯುವ ನಾಯಕ ಅಮರ ಶಿವ ಎಂಟ್ರಿ ಕೊಟ್ಟಿದ್ದಾರೆ.
ಧಾರವಾಡ ಗ್ರಾಮಾಂತರ ಜಿಲ್ಲೆಯ ಕುಂದಗೋಳ ವಿಧಾನಸಭಾ ಕ್ಷೇತ್ರದ ಯೂತ್ ಅಧ್ಯಕ್ಷ ಪದವಿಗೆ ನೇರವಾಗಿ ಯುವಕರಿಂದ ಆಯ್ಕೆ ಆಗುವ ಸಾಹಸಕ್ಕೆ ಕೈ ಹಾಕಿದ್ದು.ಅತಿ ಚಿಕ್ಕ ವಯಸ್ಸಿನಲ್ಲೇ ಮೊದಲ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.
ಅಮರಶಿವ ಶಿವಳ್ಳಿಗೆ ಪೈಪೋಟಿ ನೀಡಲು ಕಾಂಗ್ರೆಸ್ ಪಕ್ಷದ ಯುವ ಕಾರ್ಯಕರ್ತರೇ ಎದುರಾಗಿ ಚುನಾವಣೆಗೆ ಸ್ಪರ್ಧಿಸಿದ್ದು. ಕುಂದಗೋಳ ಕ್ಷೇತ್ರದ ಅಸೆಂಬ್ಲಿ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.ಸದ್ಯ ಅಮರಶಿವನಿಗೆ ಎಲ್ಲಡೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು.ಗೆಲ್ಲುವ ವಿಶ್ವಾಸ ಬೆಂಬಲಿಗರಲ್ಲಿ ಕಂಡು ಬಂದಿದೆ.