ದರ್ಶನ್ ಗೆ ರಾಜಾತಿಥ್ಯ ಸರ್ಕಾರದ ವಿರುದ್ದ ವಿಪಕ್ಷ ಆಕ್ರೋಶ..! ಕಠಿಣ ಕ್ರಮಕ್ಕೆ ಸೂಚನೆ ಕೊಟ್ಟ ಸಿಎಂ ಸಿದ್ದರಾಮಯ್ಯ

Share to all

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಅಂದರ್ ಆಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ನಟ ದರ್ಶನ್ ಗೆ ಜೈಲಿನಲ್ಲಿ ರಾಜಾಥಿತ್ಯ ಸಿಗುತ್ತಿದೆ. ಜೈಲಿನ ಪೋಟೋಗಳು, ವಿಡಿಯೋ ವೈರಲ್ ಹಿನ್ನಲೆ ಸರ್ಕಾರದ ವಿರುದ್ದ ಜನಾಕ್ರೋಶ ಹೆಚ್ಚಾಗಿದೆ. ನಟ ದರ್ಶನ್ ನ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬಂದಿಸಿದಾಗ ಸರ್ಕಾರದ ಪರ ಪ್ರಶಂಸನೆ ವ್ಯಕ್ತವಾಗಿತ್ತು. ಒತ್ತಡದ ನಡುವೆ ಬಂದಿಸಿ ತನಿಖೆ ನಡೆಸಿದ್ದಾರೆ ಎಂದು ಎಲ್ಲರು ಅಭಿನಂದನಂದಿಸಿದ್ರು. ಹಾಗೇ ರೇಣುಕಾಸ್ವಾಮಿ ‌ಕುಟುಂಬ ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದಾಗಲೂ ನ್ಯಾಯ ಕೊಡಿಸೋದಾಗಿ ಸಿಎಂ ಭರವಸೆ ನೀಡಿದ್ರು. ಆದ್ರೆ ಜೈಲಿನ್ನ ಡಿ ಗ್ಯಾಂಗ್  ರೆಸಾರ್ಟ್ ಮಾದರಿಯಾಗಿ ಬಳಸಿಕೊಳ್ಳುತ್ತಿರೋ ಸುದ್ದಿ ಬಯಲಾಗಿದೆ. ಇದು ಸರ್ಕಾರದ ವಿರುದ್ದ ಅಕ್ರೋಶಕ್ಕೆ ಕಾರಣವಾಗಿದ್ದು ವಿಪಕ್ಷಗಳು ಆಕ್ರೋಶ ಹೊರಹಾಕ್ತಿವೆ.

ವಿಪಕ್ಷ ನಾಯಕ ಅಶೋಕ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ ಜೈಲಲ್ಲಿ ರೈಡ್ ಮಾಡಿದ್ದಾರೆ. ಆದ್ರು ಫೋಟೋ ತೆಗೆಯೋಕೆ ಮೊಬೈಲ್ ಎಲ್ಲಿ ಸಿಕ್ತು, ಇದೆಲ್ಲಾ ನುಳುಚಿಕೊಳ್ಳುವ ವಿಚಾರ. ಜೈಲಲ್ಲಿ‌ ಎಲ್ಲವೂ ರಾಜಾರೋಷವಾಗಿ ನಡೆಯುತ್ತಿದೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ. ಇಷ್ಟೆಲ್ಲಾ ಅತ್ಯಾಚಾರ ಆಗ್ತಿದೆ. ಕೆಲ ಮಂತ್ರಿಗಳು ನಮಗೆ ಯಾವ ಖಾತೆ ಸಿಗುತ್ತೆ, ಯಾವ ಖಾತೆ ಹೋಗುತ್ತೆ ಅಂತ ಭೀತಿಯಲ್ಲಿದ್ದಾರೆ. ಜೈಲಲ್ಲಿ ನಡೆದ ಘಟನೆ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ ಅನ್ನೋದಕ್ಕೆ ಸಾಕ್ಷಿ ಕಾಂಗ್ರೆಸ್ ಸರ್ಕಾರ ಇದಕ್ಕೆ ಉತ್ತರ ಕೊಡಬೇಕು ಅಂತ ಆಗ್ರಹಿಸಿದ್ದಾರೆ ಅಶೋಕ.

ನಟ ದರ್ಶನ್ ಪೋಟೋ ವೈರಲ್ ಆಗ್ತಿದ್ದಂತೆ ನಿನ್ನೆಯೇ ಗೃಹಸಚಿವ ಜಿ.ಪರಮೇಶ್ವರ ಬಂಧಿಖಾನೆ ಡಿಜಿಗೆ ಸ್ಥಳ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದಾರೆ.  ಜೈಲರ್ಸ್,ಸಬ್ ಜೈಲರ್ಸ್,ವಾರ್ಡನ್ ಸೇರಿ 7 ಜನ ಅಧಿಕಾರಿಗಳನ್ನು ಅಮಾನತ್ತು ಮಾಡಿದ್ದಾರೆ‌. ಸಚಿವರು ಶಾಸಕರು ದರ್ಶನ್ ವಿಚಾರದಲ್ಲಿ ಒತ್ತಡ ಹಾಕ್ತಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಈ ಬಗ್ಗೆ ಮಾತನಾಡಿದ ಪರಮೇಶ್ವರ್ ಯಾರು ನನ್ನ ಮೇಲೆ ಒತ್ತಡ ಹಾಕಿಲ್ಲ ನಾನು ಯಾರಿಗೂ ಮಣಿಯಲ್ಲ ಕೇಸ್ ಅನ್ನ ಯಾವುದೇ ಕಾರಣಕ್ಕೂ ಲೂಸ್ ಮಾಡಲ್ಲ.ನಾನು ಈ ವಿಚಾರದಲ್ಲಿ ಬಲಿಪಶು ಆಗಲಾರೆ ಅನ್ನೋ ಮೂಲಕ ಒತ್ತಡ ಇರೋದನ್ನ ಒಪ್ಪಿಕೊಂಡಿದ್ದಾರೆ ಪರಂ.

ಇನ್ನು ಇದೇ ವಿಚಾರವಾಗಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ನಾನು ಕೂಡ ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ಅತ್ಯಂತ ಪ್ರಾಮಾಣಿಕ ಮತ್ತು ಸ್ಟ್ರಿಕ್ಡ್ ಆಫೀಸರ್ ಗಳನ್ನು ಇಂಥಹ ಸ್ಥಳಕ್ಕೆ ಹಾಕಬೇಕು, ಆಗ ಮಾತ್ರ ಈ ರೀತಿ ಘಟನೆಗಳು ಆಗೋದಿಲ್ಲ.ಕೆಳಹಂತದ ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಿದರೆ ಪ್ರಯೋಜನ ಇಲ್ಲ ಈ ಘಟನೆಯಲ್ಲಿ ಯಾವ ದೊಡ್ಡ ಅಧಿಕಾರಿ ಇದ್ರೂ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇಂತಹ ಘಟನೆಗಳು ಪುನರಾವರ್ತನೆ ಆಗದ ರೀತಿ ಕ್ರಮ ತೆಗೆದುಕೊಳ್ಳುಬೇಕು ಇದು ರಾಜ್ಯ ಸರ್ಕಾರದ ಹೊಣೆಯಲ್ಲ ಆದರೆ ಲೋಪ ಆಗಿರೋದು ನಿಜ ಅಂತ ಒಪ್ಪಿಕೊಂಡಿದ್ದಾರೆ ರಾಮಲಿಂಗಾರೆಡ್ಡಿ.


Share to all

You May Also Like

More From Author