ಪೂರ್ವ ಜನ್ಮದಲ್ಲಿ ನಾವಿಬ್ಬರು ಪ್ರೇಮಿಗಳು: ಯೋಗ ಗುರು ಅತ್ಯಾಚಾರ ಕೇಸ್ ಗೆ ಟ್ವಿಸ್ಟ್!

Share to all

ಚಿಕ್ಕಮಗಳೂರು:- ಅನಿವಾಸಿ ಭಾರತೀಯ ವೈದ್ಯೆ ಮೇಲೆ ಯೋಗ ಗುರು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್​ಐಆರ್​ನಲ್ಲಿ ಅಚ್ಚರಿಯ ಮಾಹಿತಿ ಹೊರ ಬಿದ್ದಿದೆ. ಇದರ ಪ್ರಕಾರ, ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ದೊರೆತಿದೆ. ಪೂರ್ವ ಜನ್ಮದ ಕಥೆ ಹೇಳಿ ಯೋಗ ಗುರು ಅತ್ಯಾಚಾರ ಎಸಗಿದ್ದರು ಎನ್ನಲಾಗಿದೆ.

ಪೂರ್ವ ಜನ್ಮದಲ್ಲಿ ನಾವಿಬ್ಬರು ಪ್ರೇಮಿಗಳು ಎಂದು ಸಂತ್ರಸ್ತೆಯನ್ನು ನಂಬಿಸುತ್ತಿದ್ದ ಯೋಗ ಗುರು ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ. ಪ್ರದೀಪ್ ಉಲ್ಲಾಳ್​ಗೆ ವಿದೇಶದಲ್ಲಿ ನೂರಾರು ಶಿಷ್ಯರಿದ್ದಾರೆ. ಸಂತ್ರಸ್ತೆ ಎನ್​ಆರ್​​ಐ ವೈದ್ಯೆ ಪ್ರದೀಪ್ ಜೊತೆ 2020 ರಿಂದ ಸಂಪರ್ಕದಲ್ಲಿದ್ದರು.

ಸದ್ಯ ವಿದೇಶಿ ಮಹಿಳೆಯರ ಮೇಲೆ ಯೋಗ ಗುರುವಿನಿಂದ ಅತ್ಯಾಚಾರ ಪ್ರಕರಣ ತನಿಖೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಇನ್ಸ್​​ಪೆಕ್ಟರ್ ಸಚಿನ್ ನೇತೃತ್ವದ ತಂಡ‌ದಿಂದ ತನಿಖೆ ನಡೆಯುತ್ತಿದೆ. ಗಂಭೀರ ಪ್ರಕರಣವಾಗಿ ಪರಿಗಣಿಸಿ ವಿಶೇಷ ತನಿಖೆ ನಡೆಸಲಾಗುತ್ತಿದ್ದು, ಪಶ್ಚಿಮ ವಲಯದ ಐಜಿಪಿ ಅಮಿತ್ ಸಿಂಗ್ ಪ್ರಕರಣ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದಾರೆ.


Share to all

You May Also Like

More From Author