ಕುಖ್ಯಾತ ಗ್ಯಾಂಗ್ ಸ್ಟಾರ್ ಬಚ್ಚಾಖಾನ್ ಬಂಧನ.. ಹುಬ್ಬಳ್ಳಿ ಸಿಸಿಬಿ ಪೊಲೀಸರಿಂದ ಬಚ್ಚಾಖಾನ್ ಬಂಧನ. ಬೆಂಗಳೂರಿನಲ್ಲಿ ಬಚ್ಚಾಖಾನ್ ಬಂಧಿಸಿದ ಸಿಸಿಬಿ..

Share to all

.ಕುಖ್ಯಾತ ಗ್ಯಾಂಗ್ ಸ್ಟಾರ್ ಬಚ್ಚಾಖಾನ್ ಬಂಧನ..
ಹುಬ್ಬಳ್ಳಿ ಸಿಸಿಬಿ ಪೊಲೀಸರಿಂದ ಬಚ್ಚಾಖಾನ್ ಬಂಧನ.
ಬೆಂಗಳೂರಿನಲ್ಲಿ ಬಚ್ಚಾಖಾನ್ ಬಂಧಿಸಿದ ಸಿಸಿಬಿ..

ಹುಬ್ಬಳ್ಳಿ;-ಆಸ್ತಿ ವಿಷಯದಲ್ಲಿ ವ್ಯಕ್ತಿಯೊಬ್ಬರಿಗೆ ಧಮಕಿ ಹಾಕಿದ ಆರೋಪದ ಮೇಲೆ ಗ್ಯಾಂಗ್ ಸ್ಟಾರ್ ಬಚ್ಚಾಖಾನ್ ನನ್ನು ಹುಬ್ಬಳ್ಳಿ ಸಿಸಿಬಿ ಪೋಲೀಸರು ನಿನ್ನೆ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ..

ವ್ಯಕ್ತಿಯೊಬ್ಬನಿಗೆ ಸುಲಿಗೆ ಮಾಡಲು ಧಮಕಿ ಹಾಕಿದ್ದ ಗ್ಯಾಂಗ್ ಸ್ಟಾರ್ ನ ವಿರುದ್ದ
ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪೆರೋಲ್ ಮೇಲೆ ಜೈಲಿನಿಂದ ಹೊರಗಿದ್ದ ಬಚ್ಚಾಖಾನ್.
ಬಳ್ಳಾರಿ ಜೈಲ್ ನಲ್ಲಿ ಬೆಂಗಳೂರಿನ ಸುಬ್ಬಾರಾವ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ.

ಜೈಲಿನಲ್ಲಿ ಇದ್ದುಕೊಂಡೇ ಧಾರವಾಡದ ರೌಡಿ ಪ್ರುಟ್ ಇರ್ಪಾನ್ ಮರ್ಡರ್ ಮಾಡಿಸಿದ್ದನು ಈ ಗ್ಯಾಂಗ್ ಸ್ಟಾರ್ ಬಚ್ಚಾಖಾನ್.

ತನ್ನ ಹನ್ನೆರಡನೇ ವಯಸ್ಸಿಗೆ ಪಿಸ್ತೂಲ ಹಿಡಿದಿದ್ದ ಗ್ಯಾಂಗ್ ಸ್ಟಾರ್ ಬಚ್ಚಾಖಾನ್ ಮೂಲತ: ಮುಂಬೈನ ಮುಂಬ್ರಾ ನಿವಾಸಿಯಾಗಿದ್ದ..ಬೆಳೆದಂತೆ ಕುಖ್ಯಾತ ಅಂಡರ್ ವಲ್ಡ್೯ ಡಾನ್ ಆಗಿ ಬೆಳೆದ ಅಲ್ಲದೇ ಹಪ್ತಾ ವಸೂಲಿ,ಧಮ್ಕಿ ಕೊಟ್ಟು ಹಣ ವಸೂಲಿ,ಮರ್ಡರ್ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ..

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author