ವಿಜಯಪುರ.
ಒಂದು ಮದುವೆ ಮಾಡಬೇಕೆಂದರೆ ನೂರಾ ಒಂದು ಸುಳ್ಳು ಹೇಳಿ ಮದುವೆ ಮಾಡ್ತಾರಂತೆ ಹಾಗೊಂದು ಗಾದೆ ಮಾತು ಇದೆ.ಅಂತಹ ಮದುವೆಯಾದ ಮೇಲೂ ಪತಿ ಪತ್ನಿಯರ ಜೀವನ ಒಳ್ಳೆಯ ಹಾದಿಯಲ್ಲಿರಲಿ ಅಂತಾ ಹುಡುಗಿಯ ಮನೆಯವರು ಏನೆಲ್ಲಾ ಮಾಡಿರುತ್ತಾರೆ ಇಷ್ಟೆಲ್ಲಾ ಆದ ಮೇಲೂ ಗಂಡ ಹೆಂಡತಿಗೆ ಕಿರುಕುಳ ಕೊಡುವುದು ಕೊಲ್ಲುವುದು ಸರ್ವೇಸಾಮಾನ್ಯ ಆಗಿಬಿಟ್ಟಿದೆ.ಇದಕ್ಕೊಂದು ತಾಜಾ ಉದಾಹರಣೆ ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದಲ್ಲಿ ಗಂಡನೇ ಹೆಂಡತಿಯ ಕೊಲೆ ಮಾಡಿ ಬಾವಿಗೆ ಹಾಕಿದ್ದಾನಂತೆ.ರೇಖಾ ನಾಗಪ್ಪ ಕೊಣ್ಣೂರ ಅನ್ನುವವಳೇ ಕೊಲೆಯಾದ ಮಹಿಳೆ.ರೇಖಾನ ಕುಟುಂಬದವರು ಪತಿ ನಾಗಪ್ಪಕೊಣ್ಣೂರ.ಶಂಕ್ರಪ್ಪ ಕೊಣ್ಣೂರ ಸುಸಲವ್ವ ಕೊಣ್ಣೂರ ಮೇಲೆ ವಿಜಯಪುರ ಗ್ರಾಮೀಣ ಪೋಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೊಲೆಗೆ ಕಾರಣ ಪತ್ತೆ ಹಚ್ಚುವಲ್ಲಿ ಪೋಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಉದಯ ವಾರ್ತೆ ವಿಜಯಪುರ