Darshan: ಡಿ ಗ್ಯಾಂಗ್ ನ್ಯಾಯಾಂಗ ಬಂಧನ ಅವಧಿ ಮುಕ್ತಾಯ! ನಾಳೆ ನಿರ್ಧಾರವಾಗಲಿದೆ ದಾಸನ ಜೈಲು ಭವಿಷ್ಯ

Share to all

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಯಾಗಿ ಇಂದಿಗೆ 3 ತಿಂಗಳಾಗಿದೆ. ಕೊಲೆ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.. ತಮ್ಮ ಪ್ರಕರಣದ ಚಾರ್ಜ್ ಶೀಟ್‌ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ದರ್ಶನ್‌ ಕಳೆದ ವಾರ ಟಿವಿಗಾಗಿ ವಿನಂತಿಸಿದ್ದರು. ಬೆಂಗಳೂರು ಪೊಲೀಸರು ಪ್ರಕರಣ ಸಂಬಂಧ ಈಗಾಗಲೇ  ದರ್ಶನ್‌ ಸೇರಿದಂತೆ 17 ಮಂದಿಯ ವಿರುದ್ಧ 3,991 ಪುಟಗಳ ಬೃಹತ್‌ ಆರೋಪಪಟ್ಟಿಯನ್ನು ಸಲ್ಲಿಸಿದ ನಂತರ ಈ ಬೆಳವಣಿಗೆ ನಡೆದಿದೆ.

ಆಗಸ್ಟ್‌ 29 ರಂದು ನಟನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಳ್ಳಾರಿಗೆ ಸ್ಥಳಾಂತರಿಸಲಾಯಿತು. ಕುಖ್ಯಾತ ರೌಡಿ ಶೀಟರ್‌ ವಿಲ್ಸನ್‌ ಗಾರ್ಡನ್ ನಾಗನ ಜೊತೆ ಸೇರಿದಂತೆ ಮೂವರು ವ್ಯಕ್ತಿಗಳೊಂದಿಗೆ ದರ್ಶನ್‌ ಜೈಲು ಆವರಣದಲ್ಲಿರುವ ಇದ್ದ ಫೋಟೋ  ಹೊರಬಂದ ನಂತರ ಈ ಸ್ಥಳಾಂತರ ನಡೆಯಿತು.

ನಾಳೆ‌ಗೆ ದರ್ಶನ್ 13 ದಿನಗಳ ಕಸ್ಟಡಿ ಅಂತ್ಯವಾಗುತ್ತಿದೆ. ಹೀಗಾಗಿ ಹೈ ಸೆಕ್ಯುರಿಟಿ ಸೆಲ್‌ನಲ್ಲಿ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಮಾಡಲಾಗಿದೆ. ವಿಡಿಯೋ ಸಂವಾದ ಮೂಲಕ ದರ್ಶನ್ ಕೋರ್ಟ್ ಗೆ ಹಾಜರಾಗಲಿದ್ದಾನೆ. ಬೆಂಗಳೂರು 24ನೇ ACMM ಕೋರ್ಟ್‌ ವಿಚಾರಣೆ ನಡೆಸಲಿದೆ. ವಿಡಿಯೋ ಕಾನ್ಫರೆನ್ಸ್ ಹಾಲ್ ಬದಲಾಗಿ ಹೈ ಸೆಕ್ಯುರಿಟಿ ಸೆಲ್‌ನಿಂದಲೇ ನಾಳೆ ಮದ್ಯಾಹ್ನ ಕೋರ್ಟ್‌ಗೆ ಹಾಜರಾಗಲಿದ್ದಾರೆ.

ದರ್ಶನ್‌ ಮತ್ತು ಪವಿತ್ರ ಗೌಡ ಸೇರಿದಂತೆ ಸಹ ಆರೋಪಿಗಳು ಈಗ ರಾಜ್ಯಾದ್ಯಂತ ವಿವಿಧ ಜೈಲುಗಳಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.  ಆರೋಪಪಟ್ಟಿ ಸಲ್ಲಿಸಿದಾಗಿನಿಂದ ದರ್ಶನ್ ಸಾಕಷ್ಟು ಒತ್ತಡದಲ್ಲಿದ್ದಾನೆ ಎಂದು ವರದಿ ತಿಳಿಸಿದೆ.

 


Share to all

You May Also Like

More From Author