ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಡಿಡಿಟಿಪಿ ಸಿಬ್ಬಂದಿಗಳ ತುರ್ತು ಸಭೆ ಕರೆದ ಡಿಡಿಟಿಪಿ ಮೇಡಂ.
ಉದಯ ವಾರ್ತೆ ಇಂದು ಮದ್ಯಾಹ್ನ ಹನ್ನೆರಡೂವರೆಗೆ ಡಿಡಿಟಿಪಿಯಲ್ಲಿ ಆಡಿದ್ದೇ ಆಟ ಆಗಬೇಕಿದೆ ಮೇಜರ್ ಸರ್ಜರಿ ಅಂತಾ ಸುದ್ದಿ ಪ್ರಸಾರವಾಗುತ್ತಿದ್ದಂತೆ ಮೇಡಂ ಇಂದು ಮದ್ಯಾಹ್ನ ಎಂಜನೀಯರ್ಸ್ ಮತ್ತು ಸಿಬ್ಬಂದಿಗಳ ತುರ್ತು ಸಭೆ ಕರೆದಿದ್ದಾರೆ ಎನ್ನಲಾಗಿದೆ.ಪಾಲಿಕೆಯ ಡಿಡಿಟಿಪಿಯಲ್ಲಿ ಎಲ್ಲವೂ ಗೊತ್ತಿದ್ದು ಗೊತ್ತಿಲ್ಲದಂತೆ ನಟಿಸುವ ಮೇಡಂಗೆ ಸದ್ಯದಲ್ಲಿಯೇ ಉದಯ ವಾರ್ತೆ ಎಲ್ಲವನ್ನೂ ಬಯಲಿಗೆಳೆಯಲಿದೆ.
ಜುಲ್ಯೆ ತಿಂಗಳಲ್ಲಿ ಡಿಡಿಟಿಪಿಯಲ್ಲಿ ಹಣ ನೀಡದೇ ಯಾವುದೇ ಪ್ಯೆಲ್ ಗಳು ಮುಂದೆ ಹೋಗುವುದಿಲ್ಲಾ ಅಂತಾ ವ್ಯಕ್ತಿಯೊಬ್ಬರು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದೂ ಸಹ ಈ ಮೇಡಂಗೆ ಗೊತ್ತಿಲ್ವಂತೆ.ಕೊಟ್ಟರೂ ಕೊಟ್ಟಿರಬಹುದು ಅದು ಆಡಳಿತ ಇಲಾಖೆಗೆ ಬಂದಿರುತ್ತೇ ಅದಕ್ಕೆ ಉತ್ತರ ಕೊಟ್ಟಿರುತ್ತಾರೆ ಅಂತಾ ಹೇಳುವ ಈ ಮೇಡಂಗೆ ತಮ್ಮ ಇಲಾಖೆಯ ಮೇಲೆ ಬಂದಿರುವ ದೂರಿನ ಬಗ್ಗೆ ಗೊತ್ತಿಲ್ಲದಿದ್ದರೆ ಹೇಗೆ.ಇಂತಹ ಅಧಿಕಾರಿಗಳ ಕಣ್ಣು ತೆರೆಸಬೇಕಾದ ಶಾಸಕರು ಸಚಿವರು ಯಾಕೆ ಈ ಇಲಾಖೆ ಬಗ್ಗೆ ಗಮನಹರಿಸುತ್ತಿಲ್ಲಾ.ಅದಷ್ಟು ಬೇಗ ಜನಪ್ರತಿನಿಧಿಗಳು ಇಂತಹ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸಬೇಕಾಗಿದೆ.
ಉದಯ ವಾರ್ತೆ ಹುಬ್ಬಳ್ಳಿ