IPL 2025 ಸೀಸನ್ ಗಾಗಿ ಇದೇ ವರ್ಷದ ಕೊನೆಯ ತಿಂಗಳಲ್ಲಿ ಮೆಗಾ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ ಮುಂಬೈ ತಂಡದ ಆಟಗಾರ ಸೂರ್ಯಕುಮಾರ್ ಯಾದವ್ ರಿಲೀಸ್ ಆಗುವ ಸಾಧ್ಯತೆ ಇದ್ದು, ಖರೀದಿಗೆ RCB ಮುಗಿ ಬಿಳೋದ್ರಲ್ಲಿ ಡೌಟೇ ಇಲ್ಲ.
ವರ್ಷದ ಕೊನೆ ಡಿಸೆಂಬರ್ನಲ್ಲಿ 2025ರ ಐಪಿಎಲ್ ಮೆಗಾ ಆಕ್ಷನ್ ನಡೆಯಲಿದೆ. ಮೆಗಾ ಆಕ್ಷನ್ನಲ್ಲಿ ತಮಗೆ ಬೇಕಾದ ಆಟಗಾರರನ್ನು ಖರೀದಿ ಮಾಡಲು ಆರ್ಸಿಬಿ ಮುಂದಾಗಿದೆ. ಕ್ವಾಲಿಟಿ ಆಟಾಗರರ ಖರೀದಿ ಮಾಡಿ ಬಲಿಷ್ಠ ತಂಡ ಕಟ್ಟು ಪ್ಲಾನ್ ಆರ್ಸಿಬಿಯದ್ದು. ಹಾಗಾಗಿ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಅವರನ್ನು ಖರೀದಿ ಮಾಡಬೇಕು ಎಂಬುದು ಆರ್ಸಿಬಿ ಪ್ಲಾನ್.
ಮುಂದಿನ ಸೀಸನ್ ವೇಳೆಗೆ ಮುಂಬೈ ತಂಡವನ್ನು ಸೂರ್ಯಕುಮಾರ್ ಯಾದವ್ ಬಿಡೋದು ಪಕ್ಕಾ ಆಗಿದೆ. ಈ ಮುನ್ನವೇ ಆರ್ಸಿಬಿ ಟ್ರೇಡ್ ಮೂಲಕ ಸೂರ್ಯ ಅವರನ್ನು ಖರೀದಿ ಮಾಡೋ ಸಾಧ್ಯತೆ ಇದೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್. ಇವರು ಇದೇ ತಿಂಗಳು 13ನೇ ತಾರೀಕು 40 ವರ್ಷಕ್ಕೆ ಕಾಲಿಟ್ಟರು. ಹಾಗಾಗಿ ಫಾಫ್ಗೆ ಕೊಕ್ ಕೊಟ್ಟು, ಸೂರ್ಯಗೆ ಮಣೆ ಹಾಕಲು ಆರ್ಸಿಬಿ ಮುಂದಾಗಿದೆ. ಸದ್ಯ ಸೂರ್ಯಕುಮಾರ್ ಯಾದವ್ ಭಾರತ ಟಿ20 ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿದ್ದು, ಇವರು ಆರ್ಸಿಬಿ ತಂಡದ ನಾಯಕರಾಗಬಹುದು.