ಬೆಂಗಳೂರು:- ಬೆಂಗಳೂರಿನ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮಗಳಿಂದಲೇ ತಾಯಿಯ ಕೊಲೆ ನಡೆದಿರುವ ಘಟನೆ ಜರುಗಿದೆ. 46 ವರ್ಷದ ಜಯಲಕ್ಷ್ಮಿ ಕೊಲೆಯಾದ ಮಹಿಳೆ ಎನ್ನಲಾಗಿದೆ. ಕಳೆದ ಎರಡು ದಿನಗಳ ಹಿಂದೆ ನಡೆದಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತ ಜಯಲಕ್ಷ್ಮೀ ಮಗಳು ಪವಿತ್ರಾ ಎಂಬಾಕೆಯಿಂದ ಕೊಲೆ ನಡೆದಿದೆ.
ತನ್ನ ಸ್ನೇಹಿತ ನವನೀಶ್ ಜೊತೆ ಸೇರಿ ಪವಿತ್ರ ಕೊಲೆ ಮಾಡಿದ್ದಾರೆ. ಮೃತ ಮಹಿಳೆ ದಿನಸಿ ಅಂಗಡಿ ಹಾಕಿಕೊಂಡು ಜೀವನ ನಡೆಸ್ತುದ್ದ. ಇತ್ತ ತನ್ನ ಸ್ನೇಹಿತ ನವನೀಶ್ ಜೊತೆ ಪವಿತ್ರ ಸಂಬಂಧ ಹೊಂದಿದ್ದಳು. ಇತ್ತೀಚೆಗೆ ತಾಯಿ ಮನೆಯಲ್ಲಿಲ್ಲ ದಿದ್ದಾಗ ಸ್ನೇಹಿತನನ್ನ ಪವಿತ್ರ ಮನೆಗೆ ಕರೆಸಿಕೊಂಡಿದ್ದಳು. ನಂತರ ತಾಯಿ ಮನೆಗೆ ಬಂದಾಗ ಇಬ್ಬರ ಸಂಬಂಧದ ಬಗ್ಗೆ ಗೊತ್ತಾಗಿದೆ..
ಈ ವೇಳೆ ತಾಯಿ-ಮಗಳ ಮದ್ಯೆ ಜಗಳ ಶುರುವಾಗಿತ್ತು. ಈ ವೇಳೆ ಸ್ನೇಹಿತನ ಜೊತೆ ಸೇರಿ ತಾಯಿಯ ಕತ್ತು ಹಿಸುಕಿ ಪವಿತ್ರ ಕೊಲೆ ಮಾಡಿದ್ದಾರೆ. ಈ ವೇಳೆ ಪೊಲೀಸರಿಗೆ ಆರೋಪಿ ಪವಿತ್ರಾ, ಬಾತ್ ರೂಮ್ ನಲ್ಲಿ ಬಿದ್ದು ತಾಯಿ ಸಾವು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಜಯಲಕ್ಷ್ಮಿ ಸಾವನ್ನಪ್ಪಿದ ಬಳಿಕ ಪವಿತ್ರಾ ಬಾತ್ ರೂಂನಲ್ಲಿ ಬಿದ್ದು ಸತ್ತಿದ್ದಾರೆ ಎಂದು ನಾಟಕ ಮಾಡಿದ್ದಾರೆ. ಆದರೆ ಮೃತದೇಹ ನೋಡಿದ ಪೊಲೀಸರಿಗೆ ಅನುಮಾನ ಬಂದಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹ ನೋಡಿ ಅನುಮಾನ ವ್ಯಕ್ತ ಪಡಿಸಿದ್ದಾರೆ. ಪೋಸ್ಟ್ ಮಾರ್ಟಮ್ ವೇಳೆ ಕೊಲೆ ಅನ್ನೋದು ಪತ್ತೆಯಾಗಿದೆ.
ನಂತರ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ಸದ್ಯ ಕೊಲೆ ಮಾಡಿದ್ದ ಪವಿತ್ರ ಮತ್ತು ನವನೀಶ್ ನನ್ನ ಅರೆಸ್ಟ್ ಮಾಡಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.