ಅನ್ನಭಾಗ್ಯ ಫಲಾನುಭವಿಗಳಿಗೆ ಸಡನ್ ಶಾಕ್: 3 ತಿಂಗಳಿನಿಂದ ಫಲಾನುಭವಿಗಳ ಖಾತೆಗಳಿಗೆ ವರ್ಗಾವಣೆಯಾಗದ ಹಣ

Share to all

ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳ ಅನುಷ್ಠಾನದ ಸಂದರ್ಭದಲ್ಲಿ ಫಲಾನುಭವಿಗಳಿಗೆ ಸಿಗದ ತಾಂತ್ರಿಕ ಸಹಾಯ ಒಂದೆಡೆಯಾದರೆ ಜಿಲ್ಲಾ ಕೇಂದ್ರದಲ್ಲಿನ ಕರ್ನಾಟಕ 1 ಕೇಂದ್ರದಲ್ಲಿ ಸಿಗುವ ಸಹಾಯಕ ಸೌಲಭ್ಯಗಳಲ್ಲಿನ ಗೊಂದಲದಿಂದ ಫಲಾನುಭವಿಗಳು ಅತಂತ್ರಗೊಂಡು ಪರದಾಡುವಂತಾಗಿದೆ.

ಉಚಿತ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಗೆ ಮತ್ತೆ ಗ್ರಹಣ ಹಿಡಿದಿದೆ. ಅಕ್ಕಿ‌ ಬದಲಿಗೆ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದ್ದು, ಕಳೆದ ಮೂರು ತಿಂಗಳಿನಿಂದ ಹಣ ವರ್ಗಾವಣೆಯಾಗಿಲ್ಲ. ಇದೀಗ ಅನ್ನಭಾಗ್ಯ ಫಾಲಾನುಭವಿಗಳು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ಸದ್ಯ ಗೃಹಲಕ್ಷ್ಮಿ ಯೋಜನೆಯಡಿ ನೀಡುತ್ತಿದ್ದ 2,000 ರೂ. ಎರಡು ತಿಂಗಳುಗಳಿಂದ ಫಲಾನುಭವಿಗಳ ಖಾತೆಗೆ ವರ್ಗವಾಗಿಲ್ಲ. ಇದೀಗ ಅನ್ನಭಾಗ್ಯದ ಹಣ ಕೂಡ 2 ತಿಂಗಳಿನಿಂದ ಬಂದಿಲ್ಲ ಅಂತ ಬಿಪಿಎಲ್ ಫಲಾನುಭವಿಗಳು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವೇನೂ ಸಿದ್ದರಾಮಾಯ್ಯನವರನ್ನ ದುಡ್ಡೇ ಕೊಡಿ, ಅಕ್ಕಿಕೊಡಿ, ಫ್ರಿ ಬಸ್ ಕೊಡಿ ಅಂತ ಹೇಳಿಲ್ಲ. ಆದರೆ ಅಧಿಕಾರಕ್ಕೆ ಬರುವ ಆಸೆಗಾಗಿ ಯೋಜನೆ ಜಾರಿ ಮಾಡಿ, ಸ್ವಲ್ಪ ದಿನ ಕೊಟ್ಟು ಜನರಿಗೆ ಮೋಸ ಮಾಡಿದ್ದಾರೆ.‌ ಸರ್ಕಾರ ಕೊಡುವ ದುಡ್ಡನ್ನು ನಂಬಿ ನಾವು ಜೀವನ ಮಾಡುತ್ತಿಲ್ಲ. ಆದರೆ ಕೊಡುತ್ತೇವೆ ಎಂದು ಮೋಸ ಮಾಡಿದರು ಎಂದು ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದುಡ್ಡು ಬರುತ್ತದೆ ಎಂದು ಇ-ಕೆವೈಸಿ ಮಾಡಿ, ಪಾನ್ ಲಿಂಕ್ ಮಾಡ್ಸಿ, ಆಧಾರ್ ಲಿಂಕ್ ಮಾಡ್ಸಿ ಎಂದು ಬೆಂಗಳೂರು ಒನ್ ಕೇಂದ್ರಗಳಲ್ಲಿ ವಾರಗಟ್ಟಲೆ ನಿಂತು ಅರ್ಜಿ ಸಲ್ಲಿಕೆ ಮಾಡಿದೆವು. ಈಗ ನೋಡಿದರೆ ಹಣವೂ‌ ಇಲ್ಲ, ಅಕ್ಕಿಯೂ ಇಲ್ಲ. ನಮಗೆ ದುಡ್ಡು ಕೊಡದೇ ಇದ್ದರೂ ಪರ್ವಾಗಿಲ್ಲ. ಆದರೆ ಅಕ್ಕಿಯನ್ನಾದರೂ ಕೊಡಿ ಎಂದು ಫಲಾನುಭವಿಗಳು ಆಗ್ರಹಿಸಿದ್ದಾರೆ.

 


Share to all

You May Also Like

More From Author